ರಾಕೇಶ್ ಅಡಿಗ ಮಾಡಿದ ಪ್ರ್ಯಾಂಕ್ ಗೆ ಪ್ರಶಾಂತ್ ಸಂಬರ್ಗಿ ಸಿಟ್ಟು, ಕಣ್ಣೀರು
ಅನುಪಮಾ ಗೌಡ ಮತ್ತು ರಾಕೇಶ್ ಅಡಿಗ ಮನೆಯವರನ್ನು ಪ್ರ್ಯಾಂಕ್ ಮಾಡಲು ಐಡಿಯಾ ಮಾಡಿದ್ದರು. ಅದರಂತೆ ರಾಕೇಶ್ ಬಾಯಿಗೆ ಪೇಸ್ಟ್ ನೊರೆ ಹಾಕಿಕೊಂಡು ಫಿಟ್ಸ್ ಬಂದವರ ರೀತಿಯಲ್ಲಿ ಗಾರ್ಡನ್ ಏರಿಯಾದಲ್ಲಿ ಬಿದ್ದರು. ಇದನ್ನು ನೋಡಿ ಅಮೂಲ್ಯ ಗೌಡ ಮನೆಯವರೆಲ್ಲರನ್ನೂ ಕರೆದರು.
ರಾಕೇಶ್ ನನ್ನು ನೋಡಿ ಪ್ರಶಾಂತ್ ನಿಜವಾಗಿಯೂ ಆತನಿಗೆ ಫಿಟ್ಸ್ ಬಂದಿದೆ ಎಂದುಕೊಂಡು ಗಾಬರಿಯಾದರು. ಆದರೆ ಇದೆಲ್ಲಾ ಪ್ರ್ಯಾಂಕ್ ಎಂದು ರಾಕೇಶ್ ನಗುತ್ತಿದ್ದಂತೇ ಸಿಟ್ಟಿಗೆದ್ದ ಪ್ರಶಾಂತ್ ನೇರವಾಗಿ ರಾಕೇಶ್ ಕಾಲರ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ನೀವು ಈ ರೋಗ ಇರುವವರಿಗೆ ಅವಮಾನ ಮಾಡಿದ್ದೀರಾ ಎಂದು ಕೋಪದಿಂದಲೇ ಹೇಳಿದರು. ನನಗೂ ಇದೇ ಸಮಸ್ಯೆಯಿರುವ ಮಗ ಇದ್ದಾನೆ. ಅವನು ಈಗ ಚಿಕಿತ್ಸೆ ಪಡೆದು ಗುಣಮುಖನಾಗಿದ್ದಾನೆ. ನಿನ್ನನ್ನು ನೋಡಿದಾಗ ನನಗೆ ಅವನೇ ನೆನಪಾದ ಎಂದು ಕಣ್ಣೀರು ಹಾಕಿದರು. ಇದನ್ನು ನೋಡಿ ರಾಕೇಶ್ ಮತ್ತು ಅನುಪಮಾ ತಮ್ಮ ಪ್ರ್ಯಾಂಕ್ ಗೆ ಕ್ಷಮೆ ಯಾಚಿಸಿದರು.
-Edited by Rajesh Patil