ಚಿತ್ರರಂಗಕ್ಕೆ ಸಿನಿಪ್ರಿಯರನ್ನು ಸೆಳೆಯಲು ಪ್ರಿ ರಿಲಸ್ ಈವೆಂಟ್ ತಂತ್ರ
ಈಗಾಗಲೇ ಇಂದು ಬಿಡುಗಡೆಯಾಗುತ್ತಿರುವ ನಿನ್ನ ಸನಿಹಕೆ ಸಿನಿಮಾ ತಂಡ, ಮುಂದೆ ಬಿಡುಗಡೆಯಾಗಲಿರುವ ಸಲಗ ಸಿನಿಮಾ ತಂಡಗಳು ಪ್ರಿರಿಲೀಸ್ ಈವೆಂಟ್ ಆಯೋಜಿಸುತ್ತಿವೆ. ಇನ್ನು, ಕೋಟಿಗೊಬ್ಬ 3 ಸಿನಿಮಾ ಕೂಡಾ ಪ್ರಿರಿಲೀಸ್ ಈವೆಂಟ್ ಮಾಡುವ ಯೋಚನೆ ಹೊಂದಿದೆ. ಈ ಮೂಲಕ ಸ್ಟಾರ್ ನಟರನ್ನು ಕರೆತಂದು ಜನರ ಮುಂದೆ ಚಿತ್ರದ ಬಗ್ಗೆ ಪ್ರಚಾರ ಕೊಟ್ಟು ಸಿನಿಮಾ ವೀಕ್ಷಿಸಲು ಥಿಯೇಟರ್ ನತ್ತ ಸೆಳೆಯುವುದು ಯೋಜನೆಯಾಗಿದೆ.