ಗಾಂಧಿಗಿರಿಯಾಗಿ ಟೈಟಲ್ ಬದಲಾವಣೆ ಮಾಡಿಕೊಂಡ ಪ್ರೇಂ ಅವರ ಹಿಟ್ಲರ್

ಬುಧವಾರ, 15 ಏಪ್ರಿಲ್ 2015 (10:26 IST)
ಸಾಮಾನ್ಯ ಈ ನಟ-ನಿರ್ದೇಶಕ ಯಾವುದೇ ಚಿತ್ರ ನಿರ್ದೇಶಿಸಲಿ ಅಥವಾ ನಟಿಸಲಿ ಏನಾದರೊಂದು ವಿವಾದ ಇದ್ದೇ ಇರುತ್ತದೆ. ನಾವು ಈಗ ಹೇಳುತ್ತಿರುವುದು ಜೋಗಿ ಪ್ರೇಂ ಬಗ್ಗೆ ಎನ್ನುವ ಸಂಗತಿ ಈಗಾಗಲೇ ನಿಮಗೆ ಅರ್ಥ ಆಗಿದೆ.  ಈಗ ಅವರ ಹೊಚ್ಚ ಹೊಸ ಚಿತ್ರ ಹಿಟ್ಲರ್ ಟೈಟಲ್ ಬಗ್ಗೆ ತೊಂದರೆ ಎದುರಿಸಿ, ಅದು ಬದಲಾಗಿ ಮತ್ತೆ ಹೊಸ ಶೀರ್ಷಿಕೆ ಹೊಂದಿದೆ. 
ನಿಮಗೆ ಗೊತ್ತಿರುವ ಹಾಗೆ ರಘು ಹಾಸನ್ ಅವರ ನಿರ್ದೇಶನದಲ್ಲಿ ಈಗ ಹಿಟ್ಲರ್ ಎನ್ನುವ ಚಿತ್ರ ನಿರ್ಮಾಣವಾಗುತ್ತಿದೆ. ಆದರೆ ಆ ಚಿತ್ರದ ಶೀರ್ಷಿಕೆಯನ್ನು ಈಗಾಗಲೇ ಟೇಶಿ  ವೆಂಕಟೇಶ್ ಅವರು ಪಡೆದಿದ್ದು, ಹಿಟ್ಲರ್ ಬದಲಿಗೆ ಗಾಂಧಿಗಿರಿ ಎನ್ನುವ  ಶೀರ್ಷಿಕೆ ಪಡೆದಿದ್ದಾರೆ ಪ್ರೇಂ ತಂಡ. ಮೊದಲ ಟೈಟಲ್ ಹಾಗೂ ಈಗಿನ ಟೈಟಲ್ ಸಂಪೂರ್ಣವಾಗಿ ವಿರುದ್ಧವಾಗಿದ್ದು ಅದು ಮತ್ಯಾವ ರೀತಿಯ ವಿವಾದ ಹುಟ್ಟು ಹಾಕುತ್ತದೆಯೋ ಗೊತ್ತಿಲ್ಲ.
 
ಆದರೆ ಹಿಟ್ಲರ್ ಟೈಟಲ್ ನಿರ್ದೇಶಕ ಟೇಶಿ ವೆಂಕಟೇಶ್ ಅವರ ಸುಪರ್ದಿಯಲ್ಲಿ ಇರುವುದರಿಂದ ಕೆಎಫ್ ಸಿಸಿ  ಟೈಟಲ್ ಕಮಿಟಿಗೆ ಜೋಗಿ ಪ್ರೇಂ ಟೀಮ್ ಪತ್ರ ಬರೆದು ಅದೇ ಟೈಟಲ್ ನೀಡುವಂತೆ ಕೇಳಿದರೂ ಅವರ ಕೆಯಿಂದ ಸಮ್ಮತಿ ದೊರೆತಿಲ್ಲ. ಆ ಕಾರಣದಿಂದ ಈಗ ಗಾಂಧಿಗಿರಿ ಮಾಡಲು ಸಿದ್ಧರಾಗಿದ್ದಾರೆ. ಪ್ರೇಂಗೆ ಈ ಟೈಟಲ್ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆಯಂತೆ. ಪಾಪ ಪ್ರೇಂ ಇನ್ನೇನು ತಾನೇ ಮಾಡಲು ಸಾಧ್ಯ?!

ವೆಬ್ದುನಿಯಾವನ್ನು ಓದಿ