ಪಾಕಿಸ್ತಾನದಲ್ಲೂ ಬಿಡುಗಡೆಯಾಗಲಿದೆ 'ಪ್ರೇಮ್ ರತನ್ ಧನ್ ಪಾಯೋ'

ಶನಿವಾರ, 7 ನವೆಂಬರ್ 2015 (09:41 IST)
ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿ ಜಾನ್ ಸಿನಿಮಾ ಈಗಾಗಲೇ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಪಾಕಿಸ್ತಾನದಲ್ಲೂ ಸಿನಿಮಾಗೆ ಪ್ರೇಕ್ಷರಿಂದ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಇದೀಗ ಸಲ್ಮಾನ್ ಖಾನ್ ಅವರ ಮುಂದಿನ ಸಿನಿಮಾ ಪ್ರೇಮ್ ರತನ್ ಪಾಯೋ ಸಿನಿಮಾ ಕೂಡ ಪಾಕ್ ನಲ್ಲಿ ರಿಲೀಸ್ ಆಗುತ್ತಿದೆ,
ಸಲ್ಲು ಹಾಗೂ ಸೋನಮ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಪ್ರೇಮ್ ರತನ್ ಧನ್ ಪಾಯೋ ಸಿನಿಮಾ ಇದೇ ತಿಂಗಳ 12 ಅಂದ್ರೆ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಸಿನಿಮಾ ಭಾರತದಲ್ಲಿ ರಿಲೀಸ್ ಆಗುವ ದಿನವೇ ಪಾಕಿಸ್ತಾನದಲ್ಲೂ ರಿಲೀಸ್ ಆಗುತ್ತಿದೆ ಅಂತಾ ಸಿನಿಮಾ ತಂಡದ ಮೂಲಗಳು ತಿಳಿಸಿವೆ. ಈ ಹಿಂದೆಯೇ ಸಲ್ಲು ನಮ್ಮ ಸಿನಿಮಾ ಗಡಿಯಾಚೆಗೂ ರಿಲೀಸ್ ಆಗ್ಬೇಕು ಎಂದು ಕಾರ್ಯಕ್ರಮವೊಂದರಲ್ಲಿ ತಮ್ಮ ಆಸೆಯನ್ನು ಹೊರ ಹಾಕಿದ್ದರು. ಇದೀಗ ಸಿನಿಮಾ ರಿಲೀಸ್ ಆಗುತ್ತಿರೋದು ಅವರಿಗೆ ಖುಷಿ ನೀಡಿದೆ.
 
ಇನ್ನು ಸಿನಿಮಾ ಪಾಕ್ ನಲ್ಲಿ ರಿಲೀಸ್ ಆಗುತ್ತಿರೋದಕ್ಕೆ ಪ್ರತಿಕ್ರಿಯಿಸಿರುವ ಸಿನಿಮಾ ತಂಡ ಸಿನಿಮಾ ಅನ್ನೋದು ಉತ್ತಮ ಮಾಧ್ಯಮ. ಅದರಿಂದ ಏನೂ ಬೇಕಾದರೂ ಮಾಡಬಹುದು.ಇದು ಸಮಾಜದ ಮೇಲೆ ಭಾರೀ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಇದಕ್ಕಿಂತ ಉತ್ತಮ ಮಾಧ್ಯಮ ಬೇರೊಂದಿಲ್ಲ ಎಂದಿದ್ದಾರೆ.
 

ವೆಬ್ದುನಿಯಾವನ್ನು ಓದಿ