ಜೋಗಯ್ಯ ಪ್ರೇಮ್ ಗಾಂಧಿಗಿರಿ ಪೋಸ್ಟರ್ ರಿಲೀಸ್

ಶುಕ್ರವಾರ, 10 ಫೆಬ್ರವರಿ 2017 (12:59 IST)
ಪ್ರಚಾರ ಪ್ರಿಯ ನಿರ್ದೇಶಕ ಎಂದೇ ಜನಜನಿತರಾಗಿರುವ ಜೋಗಿ ಪ್ರೇಮ್ ಅಭಿನಯದ ಮತ್ತೊಂದು ಚಿತ್ರ ಬರುತ್ತಿದೆ. ಗಾಂಧಿಗಿರಿ ಎಂದು ಹೆಸರಿಟ್ಟಿರುವ ಈ ಚಿತ್ರಕ್ಕೆ ರಘು ಹಾಸನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರೀಕರಣ ಮುಗಿದಿದ್ದು, ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ ಗಾಂಧಿಗಿರಿ.
 
ಜೋಗಿ ಚಿತ್ರದಲ್ಲಿ ಅಮ್ಮ ಮಗನ ಭಾವನಾತ್ಮಕ ಸನ್ನಿವೇಶಗಳು ಹೈಲೈಟ್ ಆಗಿದ್ದವು. ಆ ಚಿತ್ರದಲ್ಲಿ ಶಿವಣ್ಣನಿಗೆ ಅಮ್ಮನಾಗಿ ಅರುಂಧತಿ ನಾಗ್ ಕಾಣಿಸಿಕೊಂಡಿದ್ದರು. ಇದೀಗ ಪ್ರೇಮ್‌ಗೆ ಅಮ್ಮನಾಗಿದ್ದಾರೆ ಅರುಂಧತಿ ನಾಗ್. ಇನ್ನೊಂದು ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಪ್ರೇಮ್‌ಗೆ ಜೋಡಿಯಾಗಿ ತುಪ್ಪದ ಬೆಡಗಿ ರಾಗಿಣಿ ಕಾಣಿಸಿಕೊಳ್ಳುತ್ತಿರುವುದು.
 
ರಾಗಿಣಿ ಅವರದು ಚಿತ್ರದಲ್ಲಿ ಇಂಗ್ಲಿಷ್ ಮೇಡಂ ಪಾತ್ರವಂತೆ. ಕಾಮಿಡಿ, ಆಕ್ಷನ್, ಸೆಂಟಿಮೆಂಟ್, ಲವ್ ಸಬ್ಜೆಕ್ಟ್‌ಗಳನ್ನು ಒಳಗೊಂಡಿರುವ ಚಿತ್ರ ಇದೆನ್ನಬಹುದು. ರಂಗಾಯಣ ರಘು, ಕುರಿ ಪ್ರತಾಪ್ ಸಹ ಪಾತ್ರವರ್ಗದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ