ಬಾಲಿವುಡ್ ನಟಿಗೆ ಥ್ಯಾಂಕ್ಸ್ ಎಂದ ಪ್ರಧಾನಿ ಮೋದಿ

ಗುರುವಾರ, 17 ಸೆಪ್ಟಂಬರ್ 2020 (22:46 IST)
ಬಾಲಿವುಡ್ ನಟಿಯೊಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ ಥ್ಯಾಂಕ್ಸ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯವನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ಕೋರಿದ್ದರು.

"ನಾನು ನೋಡಿದ ಸಂಗತಿಯಿಂದ, ಸಾಮಾನ್ಯರಿಗೆ ನಿಮ್ಮ ಮೇಲಿನ ಗೌರವವು ಬೇರೆ ಯಾವುದೇ ಪ್ರಧಾನ ಮಂತ್ರಿ ಗಳಿಸಿದ್ದಕ್ಕೆ ಹೋಲಿಸಲಾಗುವುದಿಲ್ಲ. ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಧ್ವನಿಯನ್ನು ಸಂವಹನ ಮಾಡಲು ಸಾಧ್ಯವಾಗದ ಲಕ್ಷಾಂತರ ಭಾರತೀಯರು ನಿಮಗಾಗಿ ಪ್ರಾರ್ಥಿಸುತ್ತಿದ್ದಾರೆ" ಎಂದು ನಟಿ ಕಂಗನಾ ಟ್ವಿಟ್ ಮಾಡಿದ್ದರು. ಮೋದಿಯವರಿಗೆ ಜನ್ಮದಿನದ ಶುಭಾಶಯ ಕೋರಿದ್ದರು.

ಕಂಗನಾ ರಣಾವತ್ ಅವರ ಸಂದೇಶಕ್ಕೆ ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿ,  ಜನ್ಮದಿನದ ನಿಮ್ಮ ಶುಭಾಶಯಗಳಿಗೆ ಥ್ಯಾಂಕ್ಸ್ ಕಂಗನಾ ಜಿ ಎಂದು ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ