ಸಲಾರ್ ನಟ ಪೃಥ್ವಿರಾಜ್ ಸುಕುಮಾರನ್ ಗೆ ಶೂಟಿಂಗ್ ವೇಳೆ ಅವಘಡ

ಸೋಮವಾರ, 26 ಜೂನ್ 2023 (19:05 IST)
Photo Courtesy: Twitter
ಕೊಚ್ಚಿ: ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಗೆ ಶೂಟಿಂಗ್ ವೇಳೆ ಅವಘಡವಾಗಿದ್ದು, ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಪೃಥ್ವಿ ರಾಜ್ ವಿಲಾಯತ್ ಬುದ್ಧ ಸಿನಿಮಾದ ಶೂಟಿಂಗ್ ಮಾಡುತ್ತಿದ್ದರು. ಈ ವೇಳೆ ಸಾಹಸದ ದೃಶ್ಯದ ಚಿತ್ರೀಕರಣ ನಡೆಸುವಾಗ ಅವರ ಕಾಲಿಗೆ ಗಾಯವಾಗಿದೆ.

ಪರಿಣಾಮ ಅವರನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಹೊಂಬಾಳೆ ಫಿಲಂಸ್ ನ ಸಲಾರ್ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿರುವ ಪೃಥ್ವಿ ಇದೀಗ ಶಸ್ತ್ರಚಿಕಿತ್ಸೆಗೊಳಗಾಗಿರುವುದರಿಂದ 2-3 ತಿಂಗಳು ವಿಶ್ರಾಂತಿ ಪಡೆಯಬೇಕಾಗಬಹುದು. ಇದರಿಂದ ಅವರ ಸಿನಿಮಾ ಶೂಟಿಂಗ್ ಗಳಿಗೆ ಬ್ರೇಕ್ ಸಿಗಲಿದೆ. ಪೃಥ‍್ವಿ ಗಾಯಗೊಂಡ ಸುದ್ದಿ ತಿಳಿದ ಅವರ ಅಭಿಮಾನಿಗಳು ಅವರು ಶೀಘ್ರ ಚೇತರಸಿಕೊಳ್ಳಲೆಂದು ಸೋಷಿಯಲ್ ಮೀಡಿಯಾ ಮೂಲಕ ಹಾರೈಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ