ರಾಕಿಂಗ್ ಸ್ಟಾರ್ ಯಶ್ ಬಳಿಕ ಮಹೇಶ್ ಬಾಬು ಖರೀದಿಸಿದ್ರು ಸೇಮ್ ಕಾರು

ಭಾನುವಾರ, 25 ಜೂನ್ 2023 (09:00 IST)
ಹೈದರಾಬಾದ್: ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ರೇಂಜ್ ರೋವರ್ಸ್ ಹೊಸ ಕಾರು ಖರೀದಿಸಿ ಸುದ್ದಿಯಾಗಿದ್ದರು. ಇದೀಗ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಕೂಡಾ ಅದೇ ಕಾರನ್ನು ಖರೀದಿಸಿದ್ದಾರೆ.

ಯಶ್ ಇತ್ತೀಚೆಗೆ ರೇಂಜ್ ರೋವರ್ಸ್ ಹೊಸ ಎಡಿಷನ್ ನ ಕಾರನ್ನು ಖರೀದಿಸಿದ್ದರು. ಇದರ ಬೆಲೆ ಅಂದಾಜು 5 ಕೋಟಿ ರೂ.ಗಳಷ್ಟಿದೆ. ಇದೀಗ ಮಹೇಶ್ ಬಾಬು ಕೂಡಾ ರೇಂಜ್ ರೋವರ್ಸ್ ಕಾರು ಖರೀದಿ ಮಾಡಿದ್ದಾರೆ.

ಮಹೇಶ್ ಬಾಬು ಗೋಲ್ಡನ್ ಕಲರ್ ನ ಕಾರು ಖರೀದಿಸಿದ್ದು ಇದರ ಬೆಲೆ 5.4 ಕೋಟಿ ರೂ. ಇರಬಹುದು ಎನ್ನಲಾಗಿದೆ. ಮಹೇಶ್ ಬಾಬು ಬಳಿ ಅನೇಕ ದುಬಾರಿ ಕಾರುಗಳಿವೆ. ಇದೀಗ ಆ ಕಲೆಕ್ಷನ್ ಗೆ ಮತ್ತೊಂದು ಸೇರ್ಪಡೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ