ಬಹುದಿನಗಳ ಕನಸು ನನಸು ಮಾಡಿಕೊಂಡ ಪೃಥ್ವಿ ಅಂಬರ್

ಬುಧವಾರ, 16 ಡಿಸೆಂಬರ್ 2020 (09:12 IST)
ಬೆಂಗಳೂರು: ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ಈಗ ತಮ್ಮ ಬಹುದಿನಗಳ ಕನಸೊಂದನ್ನು ನನಸು ಮಾಡಿಕೊಂಡ ಖುಷಿಯಲ್ಲಿದ್ದಾರೆ.


ಲೈಫ್ ಈಸ್ ಬ್ಯೂಟಿಫುಲ್ ಸಿನಿಮಾದಲ್ಲಿ ನಾಯಕರಾಗಿ ಅಭಿನಯಿಸುತ್ತಿರುವ ಪೃಥ್ವಿ ಈ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಹಾಡೊಂದನ್ನು ಹಾಡಿದ್ದಾರೆ. ಅದರ ರೆಕಾರ್ಡಿಂಗ್ ಮುಗಿಸಿದ ಖುಷಿಯನ್ನು ಹಂಚಿಕೊಂಡಿರುವ ಪೃಥ್ವಿ ಇದೇ ಮೊದಲ ಬಾರಿಗೆ ಸಿನಿಮಾಗೆ ಹಾಡಿದ್ದೇನೆ. ಈ ಮೂಲಕ ನನ್ನ ಬಹುದಿನಗಳ ಕನಸು ನನಸಾಗಿದೆ ಎಂದು ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ