ದಾಂಪತ್ಯ ಜೀವನದ ಕುರಿತಾಗಿ ಹಬ್ಬಿಕೊಂಡ ವದಂತಿಗೆ ತೆರೆ ಎಳೆದ ಪ್ರಿಯಾಮಣಿ

ಶುಕ್ರವಾರ, 19 ಆಗಸ್ಟ್ 2022 (17:31 IST)
ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ನಟಿ ಸದ್ಯದಲ್ಲೇ ಪತಿ ಮುಸ್ತಫಾ ರಾಜ್ ಗೆ ವಿಚ್ಛೇದನ ನೀಡಲಿದ್ದಾರೆ ಎಂಬಿತ್ಯಾದಿ ವದಂತಿಗಳು ಹಬ್ಬಿತ್ತು.

ಇದಕ್ಕೆ ಈಗ ಸ್ವತಃ ಪ್ರಿಯಾಮಣಿ ಸ್ಪಷ್ಟನೆ ನೀಡಿದ್ದಾರೆ. ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ದಂಪತಿ ನಡುವೆ ವೈಮನಸ್ಯವೇರ್ಪಟ್ಟಿದೆ. ಹೀಗಾಗಿ ಬೇರೆಯಾಗುತ್ತಿದ್ದಾರೆ ಎಂಬಿತ್ಯಾದಿ ವದಂತಿಗಳಿತ್ತು.

ಆದರೆ ಅದೆಲ್ಲಾ ಸುಳ್ಳು, ನಾವು ಇಬ್ಬರೂ ಚೆನ್ನಾಗಿಯೇ ಜೀವನ ಮಾಡುತ್ತಿದ್ದೇವೆ ಎಂದು ಪ್ರಿಯಾಮಣಿ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆಯೂ ಒಮ್ಮೆ ಪ್ರಿಯಾಮಣಿ ದಾಂಪತ್ಯ ಜೀವನದ ಬಗ್ಗೆ ಗಾಸಿಪ್ ಹುಟ್ಟಿಕೊಂಡಿತ್ತು. ಆಗಲೂ ಪ್ರಿಯಾ ಸ್ಪಷ್ಟನೆ ಕೊಟ್ಟಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ