ಎರಡನೇ ಮದುವೆ ಮಾಡಿಕೊಳ್ಳುವ ಬಗ್ಗೆ ನಟಿ ಮೇಘನಾ ರಾಜ್ ಹೇಳಿದ್ದೇನು?
ಶುಕ್ರವಾರ, 19 ಆಗಸ್ಟ್ 2022 (09:31 IST)
ಬೆಂಗಳೂರು: ನಟಿ ಮೇಘನಾ ರಾಜ್ ಸರ್ಜಾ ಎರಡನೇ ಮದುವೆ ಬಗ್ಗೆ ನೀಡಿದ್ದಾರೆನ್ನಲಾದ ಹೇಳಿಕೆಯೊಂದು ಈಗ ಸಂಚಲನ ಸೃಷ್ಟಿಸಿದೆ.
ಮೇಘನಾ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ. ಅವರ ಹೇಳಿಕೆಗಳು ಈಗ ವೈರಲ್ ಆಗಿವೆ.
ನಮ್ಮ ಸಮಾಜವೇ ಹೀಗೆ. ಕೆಲವರು ನೀನು ಇನ್ನೊಂದು ಮದುವೆಯಾಗಬೇಕು ಅಂತಾರೆ. ಮತ್ತೆ ಕೆಲವರು ರಾಯನ್ ನ ನೋಡಿಕೊಂಡು ಒಂಟಿಯಾಗಿ ಖುಷಿಯಾಗಿರಬೇಕು ಎನ್ನುತ್ತಾರೆ. ಹೀಗಾಗಿ ನಾನು ಯಾರ ಮಾತನ್ನು ಕೇಳಲಿ? ಹೀಗಾಗಿ ನಾನು ನನ್ನ ಮನಸ್ಸಿನ ಮಾತು ಕೇಳಲು ತೀರ್ಮಾನಿಸಿದ್ದೇನೆ ಎಂದಿದ್ದಾರೆ.
ಅಷ್ಟೇ ಅಲ್ಲದೆ, ಎರಡನೇ ಮದುವೆ ಬಗ್ಗೆ ನಾನು ಇದುವರೆಗೆ ನನ್ನನ್ನು ನಾನು ಕೇಳಿಕೊಂಡೇ ಇಲ್ಲ. ನಾನು ಹಿಂದಿನದ್ದು, ಭವಿಷ್ಯತ್ ಕಾಲದ ಬಗ್ಗೆ ಯೋಚಿಸುವುದಿಲ್ಲ. ಚಿರು ಹೇಳಿಕೊಟ್ಟಂತೆ ಪ್ರಸಕ್ತ ಕಾಲದಲ್ಲಿ ಏನು ಬರುತ್ತದೋ ಅದಕ್ಕೆ ತಕ್ಕಂತೆ ಬದುಕುತ್ತೇನೆ ಎಂದಿದ್ದಾರೆ.