ಎಬಿಸಿಯಲ್ಲಿ ಒಂದು ವರ್ಷ ಪ್ರಿಯಾಂಕ ಚೋಪ್ರ ಗೀತಗಾಯನ

ಶನಿವಾರ, 20 ಡಿಸೆಂಬರ್ 2014 (14:43 IST)
ಬಾಲಿವುಡ್ ನಲ್ಲಿ ತನ್ನಪ್ರತಿಭೆ, ರೂಪದ  ಕಾರಣದಿಂದ ಪ್ರಿಯಾಂಕ ಚೋಪ್ರ  ತನಗೊಂದು ಸ್ಥಾನ ಪಡೆದಿದ್ದಾಳೆ. ಆಕೆಯು ಕೇವಲ ಹಿರಿಯ ನಟರ ಜೊತೆಗೆ ಮಾತ್ರವಲ್ಲ ಕಿರಿಯ ನಟರ ಜೊತೆಗೂ ಸಹಿತ ನಟಿಸಿ ಗೆದ್ದಿದ್ದಾಳೆ. 
ಈ ಚೆಲುವೆ ಕೈಲಿ ಬಾಲಿವುಡ್ ಚಿತ್ರಗಳು ಸಾಕಷ್ಟಿದ್ದರೂ ಸಹಿತ ತನ್ನ ಪ್ರತಿಭೆ ನಟನೆಗೆ ಮಾತ್ರ ಸೀಮಿತ ಮಾಡದೆ  ಹಾಡಿನತ್ತಲೂ ಹರಡಿದ್ದಾಳೆ. ಚಂದದ ಹಾಡುಗಾರ್ತಿ ಆಗಿರುವ ಪ್ರಿಯಾಂಕ ಇತ್ತೀಚಿಗೆ ಅಮೇರಿಕನ್ ಬ್ರಾಡ್ ಕಾಸ್ಟಿಂಗ್ ಕಂಪನಿ ಟೆಲಿವಿಶನ್ ಅಂದರೆ ಎಬಿಸಿ ಟೆಲಿವಿಷನ್‌‌ನಲ್ಲಿ ಸಂಗೀತ ಲಾಂಚ್ ಮಾಡಿದ್ದ ಬಗ್ಗೆ ಈ ಮೊದಲು ಸಾಕಷ್ಟು ಸುದ್ದಿ ಆಗಿತ್ತು. 
 
ಈಗ ಆ ಕಂಪನಿಯಲ್ಲಿ ಒಂದು ವರ್ಷಗಳ ಕಾಲದ ಡೀಲ್ ಕುದುರಿಸಿ ಕೊಂಡಿದ್ದಾಳೆ ಈ ಚೆಲುವೆ. ಈ ಸಂಗತಿ ಆಕೆಯಲ್ಲಿ ಸಿಕ್ಕಾಪಟ್ಟೆ ಖುಷಿ ನೀಡಿದೆಯಂತೆ. ಕೇವಲ ಬಾಲಿವುಡ್ ಗೆ ಸೀಮಿತವಾಗಿದ್ದ ಪಿಗ್ಗಿ ಚಾಪ್ಸ್ ಈಗ ವಿಶ್ವ ವಿಖ್ಯಾತಳಾಗಲು ಹೊರಟಿದ್ದಾಳೆ. ಆಕೆಯ ಈ ಸಾಧನೆಗೆ ವೆಬ್ ದುನಿಯಾ ಕಡೆಯಿಂದಲೂ ಶುಭ ಹಾರೈಕೆ.  
 

ವೆಬ್ದುನಿಯಾವನ್ನು ಓದಿ