ಸೂರ್ಯ ಜೊತೆ ತ್ರಿಭಾಷ ಚಿತ್ರದಲ್ಲಿ ಅಭಿನಯಿಸುತ್ತಿರುವ ಪ್ರಿಯಾಂಕ ಚೋಪ್ರ

ಬುಧವಾರ, 15 ಏಪ್ರಿಲ್ 2015 (11:05 IST)
ಸೂರ್ಯ ಜೊತೆ ಅಭಿನಯಿಸುವುದಕ್ಕೆ ಬಾಲಿವುಡ್  ಸೆಕ್ಸಿತಾರೆ ಪ್ರಿಯಾಂಕ ಚೋಪ್ರ ಸಿದ್ಧವಾಗಿದ್ದಾರೆ ಎನ್ನುವುದು ಈಗ ಕಾಲಿವುಡ್ ಪಟ್ಟಣದಲ್ಲಿ ಕೇಳಿ ಬಂದಿರುವ ಸುದ್ದಿಯಾಗಿದೆ. ಈ ಮೊದಲು ವಿಜಯ್ ಅವರ ಜೊತೆ  ತಮಿಳನ್ ಎನ್ನುವ ಚಿತ್ರದಲ್ಲಿ ನಟಿಸಿದ್ದರು ಪಿಗ್ಗಿ. ಅದಾದ ಬಳಿಕ ಸಾಕಷ್ಟು ಜನರು ತಮಿಳಿನಲ್ಲಿ ಆಕೆ ಅಭಿನಯಿಸಲೆಂದು ಪ್ರಯತ್ನಪಟ್ಟರೂ ಅವರ ಪ್ರಯತ್ನ ಫಲಕಾರಿಯಾಗಲಿಲ್ಲ.ಆಕೆ ಕಾಲಿವುಡ್ ಕಡೆಗೆ ಬರಲಾಗದಷ್ಟು ಬ್ಯುಸಿ ಆದರು. ಆದರೆ ಈಗ ಮತ್ತೆ ದಕ್ಷಿಣಕ್ಕೆ ಬರುತ್ತಿದ್ದಾರೆ. ನಟ ಸೂರ್ಯ ಜೊತೆ ಆಕೆ ನಟಿಸ ಬೇಕು ಎನ್ನುವ ಪ್ರಯತ್ನ ಈಗ ಫಲ ನೀಡಿದೆ.

ಇವರಿಬ್ಬರೂ  ನಟಿಸುವ ಕ್ರೇಜಿ ಪ್ರಾಜಕ್ಟ್ ಅಂತರರಾಷ್ಟ್ರೀಯ ಮಟ್ಟದಲ್ಲಿ  ಬಿಡುಗಡೆ ಮಾಡುವುದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಈ ಚಿತ್ರ ತಮಿಳು,ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ತೆರೆ ಕಾಣುತ್ತದೆ. ಅಷ್ಟೊಂದು ಅದ್ಧೂರಿ ನಿರ್ಮಾಣದ ಚಿತ್ರವನ್ನು ಸೂರ್ಯ 2ಡಿ ನಿರ್ಮಾಣ ಸಂಸ್ಥೆ ತಯಾರು ಮಾಡುತ್ತಿದೆ. ಇದನ್ನು ಬಾಲಿವುಡ್ ನಿರ್ದೇಶಕ- ನಿರ್ಮಾಪಕ ನಂದಿತಾ ಸಿಂಗೂ  ಜೊತೆ  ಸೇರಿ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಸೂರ್ಯ ಈಗಾಗಲೇ ತಮ್ಮ ಸಂಸ್ಥೆ  ಸೂರ್ಯ 2ಡಿಯಿಂದ  ಸುಮಾರು ನಾಲ್ಕು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. 
 
ಅದರಲ್ಲಿ ಒಂದು ಅವರ ಪತ್ನಿ ಜ್ಯೋತಿಕ ಅವರ ನಟನೆಯ 36 ವಯದಿಲೆ, ಪಾಂಡಿರಾಜ ಅವರ ನಿರ್ದೇಶನದ ಮತ್ತೊಂದು ಚಿತ್ರ, ಹೈಕು ಹೆಸರಲ್ಲಿ ಸಿದ್ಧವಾಗುತ್ತಿರುವ ಒಂದು ಸಿನಿಮಾ ಸೇರಿದಂತೆ ಇದು ನಾಲ್ಕನೆಯದ್ದು ಎನ್ನುವ ಸುದ್ದಿ  ಅಧಿಕೃತ ಮೂಲಗಳಿಂದ ಹೊರ ಬಂದಿದೆ. ನಂದಿತಾ ಸಿಂಗೂ  ಅವರ ಜೊತೆ ಸೇರಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ತಮಿಳು ಹಾಗೂ ತೆಲುಗು ಹೀರೊಯಿನ್ ಗಳು ಅಭಿನಯಿಸುತ್ತಿರುವ ಬಗ್ಗೆ ಮಾಹಿತಿ  ನೀಡಿದ್ದಾರೆ ನಂದಿತಾ.

ವೆಬ್ದುನಿಯಾವನ್ನು ಓದಿ