ಜಿದ್ ಸುಂದರಿ ಬಾರ್ಬಿ ಹಂಡ ಮಾತಿಗೆ ದಂಗಾದ ಪಿಗ್ಗಿಚಾಪ್ಸ್

ಶನಿವಾರ, 1 ನವೆಂಬರ್ 2014 (12:39 IST)
ಬಾಲಿವುಡ್ ಹೀರೋಯಿನ ಪ್ರಿಯಾಂಕ ಚೋಪ್ರ ಅವರ ಸಹೋದರಿ ಬಾರ್ಬಿ ಹಂಡ ಸಹ ಸಿನಿಮ ರಂಗಕ್ಕೆ ಎಂಟ್ರಿ ಆಗಿದ್ದಾಳೆ. ಆಕೆ ಸಿನಿಮಾ ರಂಗಕ್ಕೆ ಬಂದ ಬಳಿಕ ತನ್ನ ಹೆಸರನ್ನು ಮನ್ನಾರ ಎಂದು ಬದಲಾಯಿಸಿಕೊಂಡಿದ್ದಾಳೆ. ಈಗ ಈ ಚೆಲುವೆ ನೇರವಾದ ನಡೆಯ ಸುಂದರಿ ಎನ್ನುವ ಹೆಸರನ್ನು ಪಡೆದಿದ್ದಾಳೆ. ಅದಕ್ಕೆ ಕಾರಣ ಮನ್ನಾರ ನಟಿಸಿರುವ ಮೊದಲ ಸಿನಿಮಾ ಮಾಡಿದ ಸಂಚಲನ. 
 
ಜಿದ್ ಎನ್ನುವ ಬಾಲಿವುಡ್ ಚಿತ್ರದಲ್ಲಿ ನಟಿಸಿರುವ ಆ ಚೆಲುವೆ ಅದರಲ್ಲಿ  ಸಂಪೂರ್ಣವಾಗಿ ನಗ್ನವಾಗಿ ನಟಿಸಿ ಇನ್ನು ಮುಚ್ಚಿಟ್ಟುಕೊಳ್ಳಲು ಏನೇನೂ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾಳೆ. ಜಿದ್ ಬಗ್ಗೆ ಈಗಾಗಲೇ ಅನೇಕ ವಿಮರ್ಶೆಗಳು ಬಂದಿದ್ದು, ಅದು ಬಿಡುಗಡೆಗೆ ಮುನ್ನವೇ ಸಾಕಷ್ಟು ಸಂಚಲನ ಮೂಡಿಸಿರುವುದಲ್ಲದೆ, ಆ ಚಿತ್ರದ ಮುಖಾಂತರ ಈ ಚೆಲುವೆ ಹಾಟ್ ಹೀರೋಯಿನ್ಗಳ ಲಿಸ್ಟ್ ಗೆ ಸೇರ್ಪಡೆ ಆಗಿ ಬಿಟ್ಟಿದ್ದಾಳೆ. 
 
ಅಲ್ಲದೆ ಆಕೆಯನ್ನು ಪ್ರಿಯಾಂಕ ಚೋಪ್ರ ಕಸಿನ್ ಎಂದು ಆ ಚಿತ್ರದ ಪ್ರಮೋಶನ್ ಮಾಡುತ್ತಿದ್ದಾರೆ ಚಿತ್ರತಂಡದವರು. ಈ ರೀತಿ ಬಾರ್ಬಿ ಸಿನಿಯಾದ ಪ್ರಮೋಶನ್ ನಲ್ಲಿ ಬ್ಯುಸಿ ಆಗಿದ್ದು ಚಿತ್ರದ ಯಶಸ್ಸಿಗೆ ಮಾಡುತ್ತಿರುವ ಪ್ರಯತ್ನವು ಸಹಿತ  ಈಗ ಬಾಲಿವುಡ್ ಮಂದಿಯನ್ನು ಆಕರ್ಷಿಸಿದೆ. 
 
ಆ ಚಿತ್ರದಲ್ಲಿ ಆಕೆಯ ನಗ್ನತೆ ಸವಿಯಲು ನವೆಂಬರ್ 29 ರ ವರೆಗೂ ಕಾಯ ಬೇಕು ಮಂದಿ.ಇವೆಲ್ಲ ಒಂದು ಕಡೆ ಇಡೋಣ ಆದರೆ ಸಂದರ್ಶನ ಒಂದರಲ್ಲಿ ಆಕೆ ಮಾತನಾಡುತ್ತ ಪ್ರಿಯಾಂಕ ಚೋಪ್ರಳನ್ನು ಸಹಿತ ಬೆತ್ತಲೆಯಾಗಿ ನಟಿಸುವಂತೆ ಆಹ್ವಾನ ನೀಡಿದ್ದಾಳೆ ಈ ಚೆಲುವೆ . ಈ ಸುದ್ದಿಯಿಂದ ದಂಗಾಗಿ ಹೋಗಿದ್ದಳಂತೆ ಪಿಗ್ಗಿ ಚಾಪ್ಸ್.. ಬದಲಾವಣೆ ಬಯಸುವುದಾದರೆ ಪಿಗ್ಗಿ ಯು ಕ್ಯಾನ್ ಪ್ರೊಸೀಡ್ !!
 

ವೆಬ್ದುನಿಯಾವನ್ನು ಓದಿ