ಪ್ರಿಯಾಂಕ ಉಪೇಂದ್ರ ಹಾರರ್ ಸಿನಿಮಾಗೆ ಬೆಂಗಳೂರು ರಸ್ತೆಯೇ ಟೈಟಲ್!

ಬುಧವಾರ, 13 ನವೆಂಬರ್ 2019 (11:09 IST)
ಬೆಂಗಳೂರು: ಪ್ರಿಯಾಂಕ ಉಪೇಂದ್ರ ಅಭಿನಯದ ಉಗ್ರಾವತಾರ ಫಸ್ಟ್ ಲುಕ್ ಬಿಡುಗಡೆಯಾದ ಬೆನ್ನಲ್ಲೇ ಮತ್ತೊಂದು ಹಾರರ್ ಸಿನಿಮಾದ ಲುಕ್ ಕೂಡಾ ಬಿಡುಗಡೆಯಾಗಿದೆ.


ಪ್ರಿಯಾಂಕಗೆ ಹಾರರ್ ಸಿನಿಮಾಗಳೇನೂ ಹೊಸದಲ್ಲ. ಹಿಂದೆ ಮಮ್ಮಿ ಎಂಬ ಸಿನಿಮಾ ಮಾಡಿದ್ದರು. ಇದೀಗ ಮತ್ತೊಂದು ಅಂತಹದ್ದೇ ಹಾರರ್ ಸಿನಿಮಾ ಮಾಡುತ್ತಿದ್ದು ಇದಕ್ಕೆ ಬೆಂಗಳೂರಿನ ರಸ್ತೆ ‘ಸೈಂಟ್ ಮಾರ್ಕ್ಸ್ ರಸ್ತೆ’ ಎಂದು ಹೆಸರಿಡಲಾಗಿದೆ.

ಈ ಸಿನಿಮಾ ಕನ್ನಡ ಮಾತ್ರವಲ್ಲದೆ ತಮಿಳಿನಲ್ಲೂ ಬಿಡುಗಡೆಯಾಗಲಿದೆ. ಪ್ರಿಯಾಂಕ ಉಪೇಂದ್ರ ಮತ್ತು ಚಿತ್ರತಂಡದ ಸಮ್ಮುಖದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಟೈಟಲ್ ಅನಾವರಣ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ