ಪ್ರಭಾಸ್-ಪೂಜಾ ಹೆಗ್ಡೆ ನಡುವೆ ವೈಮನಸ್ಯ? ರಾಧೇ ಶ್ಯಾಮ್ ಜೋಡಿ ಬಗ್ಗೆ ನಿರ್ಮಾಪಕರು ಹೇಳಿದ್ದೇನು?

ಬುಧವಾರ, 22 ಸೆಪ್ಟಂಬರ್ 2021 (11:18 IST)
ಹೈದರಾಬಾದ್: ‘ರಾಧೇ ಶ್ಯಾಮ್’ ಸಿನಿಮಾದಲ್ಲಿ ಜೊತೆಯಾಗಿ ಅಭಿನಯಿಸುತ್ತಿರುವ ನಟ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಡುವೆ ಎಲ್ಲವೂ ಸರಿಯಿಲ್ಲವೇ? ಇಂತಹದ್ದೊಂದು ರೂಮರ್ ಹರಿದಾಡುತ್ತಿದ್ದು, ಇದಕ್ಕೆ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.


ಪೂಜಾ ಹೆಗ್ಡೆಯ ವೃತ್ತಿಪರತೆ ಕೊರತೆ ಪ್ರಭಾಸ್ ಗೆ ಅಸಮಾಧಾನ ಮೂಡಿಸಿದೆ. ಈ ಕಾರಣಕ್ಕೆ ಇಬ್ಬರೂ ರಾಧೇ ಶ್ಯಾಮ್ ಸೆಟ್ ನಲ್ಲಿ ಕಿತ್ತಾಡಿಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಈ ಬಗ್ಗೆ ರಾಧೇ ಶ್ಯಾಮ್ ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ಸ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ. ‘ ಈ ವರದಿಗಳೆಲ್ಲಾ ಸುಳ್ಳು. ಅವರಿಬ್ಬರ ಕೆಮಿಸ್ಟ್ರಿ ಆನ್ ಸ್ಕ್ರೀನ್ ನಷ್ಟೇ ಆಫ್ ಸ್ಕ್ರೀನ್ ನಲ್ಲೂ ಚೆನ್ನಾಗಿದೆ. ಇಬ್ಬರೂ ಪರಸ್ಪರ ಗೌರವ ಹೊಂದಿದ್ದಾರೆ. ಇದೆಲ್ಲಾ ಕಪೋಲಕಲ್ಪಿತ ವರದಿಗಳು’ ಎಂದು ಯುವಿ ಕ್ರಿಯೇಷನ್ಸ್ ಸ್ಪಷ್ಟನೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ