ನಿರ್ಮಾಪಕ ಕೆ ಮಂಜು ಪುತ್ರನ ಕಾರು ಅಪಘಾತ: ಅದೃಷ್ಟವಶಾತ್‌ ಪ್ರಾಣಪಾಯದಿಂದ ಪಾರು

Sampriya

ಗುರುವಾರ, 20 ಫೆಬ್ರವರಿ 2025 (14:59 IST)
Photo Courtesy X
ಬೆಂಗಳೂರು: ಸ್ಯಾಂಡಲ್‌ವುಡ್ ನಟ, ಖ್ಯಾತ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಕೆ ಮಂಜು ಅವರ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.

'ವಿಷ್ಣುಪ್ರಿಯಾ' ಪ್ರಮೋಷನ್‌ ಮಾಡಲು ಬೆಂಂಗಳೂರಿನಿಂದ ದಾವಣಗೆರೆಗೆ ಶ್ರೇಯಸ್ ಬಿಎಂಡಬ್ಲ್ಯೂ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಶಿರಾ ಬಳಿ ಕಾರು ಮತ್ತು ಲಾರಿ ಮಧ್ಯೆ ಅಪಘಾತ ನಡೆದಿದೆ.

ಪ್ರಾಥಮಿಕ ತನಿಖೆಯಲ್ಲಿ ಓವರ್‌ ಟೇಕ್ ಮಾಡಲು ಬಂದ ಲಾರಿ ಶ್ರೇಯಸ್ ಅವರಿದ್ದ ಕಾರಿಗೆ ಗುದ್ದಿಕೊಂಡ ಹೋಗಿದೆ ಎನ್ನಲಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಶ್ರೇಯಸ್ ಮಂಜು ಮತ್ತು ಉಳಿದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ