ವಿಷ್ಣು ಸ್ಮಾರಕ ವಿಳಂಬ ವಿರೋಧಿಸಿ ಪ್ರತಿಭಟನೆ

ಸೋಮವಾರ, 3 ಆಗಸ್ಟ್ 2015 (10:13 IST)
ವಿಷ್ಣು ಸ್ಮಾರಕ ವಿವಾದ ಸದ್ಯಕ್ಕಂತೂ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಪದೇ ಪದೇ ಒಂದೊಂದು ವಿಚಾರಕ್ಕೆ ವಿಷ್ಣುವರ್ಧನ್   ಸ್ಮಾರಕ ಸುದ್ದಿಯಾಗುತ್ತಲೇ ಇದೆ. ಇದೀಗ ಸ್ಮಾರಕ ನಿರ್ಮಾಣಕ್ಕೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ವಿಷ್ಣು ಅಭಿಮಾನಿಗಳು ಬೀದಿಗಳಿದಿದ್ದರು. 
ನಿನ್ನೆ ಅಖಿಲ ಕರ್ನಾಟಕ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸಿತು. ದಿವಂಗತ ಬಾಲಕೃಷ್ಣ ಕುಟುಂಬಸ್ಥರು ವಿಷ್ಣು ಸ್ಮಾರಕಕ್ಕೆ ಎರಡು ಎಕರೆ ಜಮೀನು ನೀಡಿರೋದಕ್ಕೆ ಕೃತಜ್ಞತೆ ತಿಳಿಸಿದ ಅಭಿಮಾನಿಗಳು, ಕಾಮಗಾರಿಗೆ ಸರ್ಕಾರ ಕೂಡಲೇ ಚಾಲನೆ ನೀಡಬೇಕು ಎಂದರು.  ಸೆಪ್ಟೆಂಬರ್ 18ಕ್ಕೆ ವಿಷ್ಣುವರ್ಧನ್ ಹುಟ್ಟುಹಬ್ಬ ಇರೋದರಿಂದ ಅಷ್ಟರೊಳಗೆ ಸರ್ಕಾರ ಗುದ್ದಲಿಪೂಜೆ ಮಾಡಿ ಕಾಮಗಾರಿ ಶುರು ಮಾಡಬೇಕು. ಇಲ್ಲವಾದಲ್ಲಿ ರಾಜ್ಯ ಬಂದ್ಿಿಗೆ ಕರೆ ನೀಡಿ, ಉಗ್ರ ಹೋರಾಟ ನಡೆಸಲಾಗುವುದು ಅಂತ ವಿಷ್ಣುವರ್ಧನ್ ಅಭಿಮಾನಿಗಳು ಎಚ್ಚರಿಕೆಯ ಕರೆ ಕೊಟ್ಟಿದ್ದಾರೆ. 
 
ಇನ್ನು ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಒಕ್ಕೂಟವೂ ಇದಕ್ಕೆ ಸಾಥ್‌ ಕೊಟ್ಟಿದ್ದು, ರಾಜ್ಯದ ವಿವಿಧೆಡೆಗಳಿಂದ  ಬಂದ ಅಭಿಮಾನಿಗಳು ಪ್ರತಿಭಟನಾ ಧರಣಿಯಲ್ಲಿ ಭಾಗಿಯಾಗಿದ್ದರು. ಒಟ್ಟಿನಲ್ಲಿ ಸ್ಮಾರಕ ನಿರ್ಮಾಣ ತಡವಾದ್ರೆ ಮತ್ತೊಂದು ಹೋರಾಟಕ್ಕೆ ಸ್ರಕಾರ ಸಾಕ್ಷಿಯಾಗುವುದು ಖಚಿತ. ಹಾಗಾಗಿ ಈ ಬಗ್ಗೆ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ.

ವೆಬ್ದುನಿಯಾವನ್ನು ಓದಿ