ಜೇಮ್ಸ್ ಮಾರ್ಚ್ 17 ಕ್ಕೆ ರಿಲೀಸ್ ಆಗೋದು ಪಕ್ಕಾ?

ಭಾನುವಾರ, 16 ಜನವರಿ 2022 (10:00 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯದಾಗಿ ನಟಿಸಿರುವ ‘ಜೇಮ್ಸ್’ ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ.

ಚಿತ್ರ ಪುನೀತ್ ಬರ್ತ್ ಡೇ ದಿನ ಅಂದರೆ ಮಾರ್ಚ್ 17 ರಂದೇ ಬಿಡುಗಡೆಯಾಗಬೇಕು ಎಂಬುದು ಅಭಿಮಾನಿಗಳ ಬಯಕೆ. ಆದರೆ ಈಗ ಕೊರೋನಾ ಕರಿಛಾಯೆಯಿದೆ. ಹೀಗಾಗಿ ಕನ್ ಫರ್ಮ್ ಆಗಿ ಹೇಳಲು ಕಷ್ಟ.

ಆದರೆ ಚಿತ್ರತಂಡ ಮಾರ್ಚ್ 17 ರಂದೇ ಸಿನಿಮಾ ಬಿಡುಗಡೆ ಮಾಡಲು ಶತಾಯ ಗತಾಯ ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ. ಜೇಮ್ಸ್ ಚಿತ್ರೀಕರಣ ವೇಳೆ ಪುನೀತ್ ನೀಡಿದ್ದ ಧ‍್ವನಿಯನ್ನೇ ಹೊಸ ತಂತ್ರಜ್ಞಾನದೊಂದಿಗೆ ಬಳಸಿಕೊಳ್ಳಲು ಚಿತ್ರತಂಡ ಪ್ರಯತ್ನ ನಡೆಸುತ್ತಿದೆಯಂತೆ. ಎಲ್ಲಾ ಸರಿ ಹೋದರೆ ಮುಂದಿನ ತಿಂಗಳು ಟೀಸರ್ ಬಿಡುಗಡೆಯಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ