ಬಿಡುಗಡೆಗೂ ಮುನ್ನವೇ ಪುನೀತ್ ರಾಜ್ ಕುಮಾರ್ ನಟಸಾರ್ವಭೌಮ ಭರ್ಜರಿ ಬ್ಯುಸಿನೆಸ್

ಮಂಗಳವಾರ, 29 ಜನವರಿ 2019 (09:43 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಟ್ರೇಲರ್ ಈಗಾಗಲೇ ಭಾರೀ ಸೌಂಡ್ ಮಾಡುತ್ತಿದೆ. ಫೆಬ್ರವರಿ 7 ರಂದು ಬಿಡುಗಡೆಯಾಗಲಿರುವ ನಟಸಾರ್ವಭೌಮ ಚಿತ್ರ ಇದೀಗ ಮತ್ತೊಂದು ದಾಖಲೆ ಮಾಡಿದೆ.


ಧೀರಜ್ ಎಂಟರ್ ಪ್ರೈಸಸ್ ಎಂಬ ವಿತರಕ ಸಂಸ್ಥೆ ಚಿತ್ರದ ವಿತರಣೆ ಹಕ್ಕು ಖರೀದಿಸಿದ್ದು, ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗಿದೆ. ಈಗಾಗಲೇ ನಟಸಾರ್ವಭೌಮದ ಟ್ರೈಲರ್, ಹಾಡುಗಳು ಯೂ ಟ್ಯೂಬ್ ನಲ್ಲಿ ದಾಖಲೆ ವೀಕ್ಷಣೆ ಪಡೆದಿದೆ.

ಚಿತ್ರದ ಬಗ್ಗೆ ಪ್ರೇಕ್ಷಕರ‍ಲ್ಲಿ ಭಾರೀ ನಿರೀಕ್ಷೆ ಹುಟ್ಟಿಕೊಂಡಿದೆ. ಹೀಗಾಗಿ ವಿತರಕ ಸಂಸ್ಥೆಯೂ ದಾಖಲೆಯ ಮೊತ್ತಕ್ಕೆ ಖರೀದಿ ಮಾಡಿದೆ ಎಂಬುದನ್ನು ಚಿತ್ರತಂಡ ಹೇಳಿಕೊಂಡಿದೆ. ಆದರೆ ಮೊತ್ತ ಎಷ್ಟು ಎಂಬುದನ್ನು ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ