ಕಬ್ಜದಲ್ಲಿ ಪವರ್ ಸ್ಟಾರ್ ಪುನೀತ್? ಅಭಿಮಾನಿಗಳಿಗೆ ಕಾದಿದೆಯಾ ಸರ್ಪೈಸ್?!

ಗುರುವಾರ, 16 ಮಾರ್ಚ್ 2023 (17:45 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಬಹುತಾರಾಗಣದ ಪ್ಯಾನ್ ಇಂಡಿಯಾ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ.

ಈ ಸಿನಿಮಾ ಪುನೀತ್ ರಾಜ್ ಕುಮಾರ್ ಹುಟ್ಟಹಬ್ಬಕ್ಕೆ ವಿಶೇಷವಾಗಿ ರಿಲೀಸ್ ಆಗುತ್ತಿದೆ. ಹೀಗಾಗಿ ಪುನೀತ್ ಅಭಿಮಾನಿಗಳಿಗೆ ಸರ್ಪೈಸ್ ಗಿಫ್ಟ್ ಇದೆಯೇ ಎಂಬ ಅನುಮಾನ ಕಾಡಿದೆ. ಇದಕ್ಕೆಂದೇ ಅಪ್ಪು ಹುಟ್ಟುಹಬ್ಬದಂದೇ ಸಿನಿಮಾ ರಿಲೀಸ್ ಆಗುತ್ತಿದೆ ಎಂಬ ಸುದ್ದಿ ಹರಿದಾಡಿದೆ.

ಪುನೀತ್ ರಾಜ್ ಕುಮಾರ್ ಕಬ್ಜ ಶೂಟಿಂಗ್ ಸೆಟ್ ಗೆ ಹಿಂದೆ ಭೇಟಿ ಕೊಟ್ಟಿದ್ದರು. ಇದೀಗ ಟ್ರೈಲರ್ ನಲ್ಲಿ ಮುಖ ಮುಚ್ಚಿಕೊಂಡ ವ್ಯಕ್ತಿ ಥೇಟ್ ಅಪ್ಪುವನ್ನೇ ಹೋಲುತ್ತಿದ್ದಾರೆ. ಹೀಗಾಗಿ ಅವರು ವಿಶೇಷ ಪಾತ್ರದಲ್ಲಿರಬಹುದು. ಇದನ್ನು ಚಿತ್ರತಂಡ ಸರ್ಪೈಸ್ ಗಿಫ್ಟ್ ಆಗಿ ಅಭಿಮಾನಿಗಳಿಗೆ ಕೊಡಲು ಉದ್ದೇಶಿಸಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ