ಕಬ್ಜ ಪ್ರಿ ಬುಕಿಂಗ್ ಡಲ್ ಆಗಿದೆಯಾ? ಅಭಿಮಾನಿಗಳಿಂದ ಕೇಳಿಬಂತು ಆರೋಪ

ಗುರುವಾರ, 16 ಮಾರ್ಚ್ 2023 (09:20 IST)
Photo Courtesy: Twitter
ಬೆಂಗಳೂರು: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ನಾಳೆ ಬಿಡುಗಡೆಯಾಗುತ್ತಿದೆ. ಆದರೆ ಪ್ರಿ ಬುಕಿಂಗ್ ಬಗ್ಗೆ ಅಭಿಮಾನಿಗಳಲ್ಲಿ ಅಸಮಾಧಾನವಿದೆ.

ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಕಬ್ಜ ಸಿನಿಮಾ ಏಕಕಾಲಕ್ಕೆ 7 ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಈ ಸಿನಿಮಾದ ಟ್ರೈಲರ್ ನೋಡಿದ ಮೇಲೆ ಚಿತ್ರದ ಮೇಲಿನ ನಿರೀಕ್ಷೆಯೂ ಹೆಚ್ಚಾಗಿದೆ. ಇದೂ ಕೂಡಾ ಕೆಜಿಎಫ್ ಸಿನಿಮಾವನ್ನು ಮೀರಿಸಲಿದೆ ಎಂದೇ ಹೇಳಲಾಗಿತ್ತು.

ಆದರೆ ಪ್ರಿ ಬುಕಿಂಗ್ ಮೊನ್ನೆಯೇ ಆರಂಭವಾಗಿದ್ದರೂ ತಕ್ಕ ರೆಸ್ಪಾನ್ಸ್ ಬಂದಿಲ್ಲ ಎನ್ನಲಾಗಿದೆ. ಇದಕ್ಕೆ ಕಾರಣ ಕಬ್ಜ ಪ್ರಚಾರ ಕೆಜಿಎಫ್ ನಷ್ಟೆಲ್ಲಾ ಬಿರುಸಾಗಿ ನಡೆದಿಲ್ಲ ಎನ್ನುವುದು ಅಭಿಮಾನಿಗಳ ವಾದ. ಕೆಲವರು ಮೊದಲು ಸಿನಿಮಾ ವಿಮರ್ಶೆ ನೋಡೋಣ. ಆಮೇಲೆ ಬುಕಿಂಗ್ ಮಾಡೋಣ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ ಚಿತ್ರತಂಡ ನೀಡಿದ ಪ್ರಚಾರ ಸಾಕಾಗಿಲ್ಲ ಎನ್ನುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇಷ್ಟು ಒಳ್ಳೆಯ ಸಿನಿಮಾ ಪ್ರಚಾರದ ಕೊರತೆಯ ಕಾರಣದಿಂದ ಕಳೆಗುಂದಬಾರದು ಎಂಬುದು ಅಭಿಮಾನಿಗಳ ಆಗ್ರಹ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ