ಪವರ್ ಸ್ಟಾರ್ ಪುನೀತ್ ಪ್ರೇರಣೆ: ಒಂದೇ ಗ್ರಾಮದ 60 ಮಂದಿ ನೇತ್ರದಾನ

ಭಾನುವಾರ, 7 ನವೆಂಬರ್ 2021 (10:25 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರೇರಣೆಯಿಂದ ಒಂದೇ ಗ್ರಾಮದ 60 ಮಂದಿ ನೇತ್ರದಾನಕ್ಕೆ ಮುಂದಾಗಿದ್ದಾರೆ.

ಪುನೀತ್ ರಾಜ್ ಕುಮಾರ್ ಸಾವಿನ ಬಳಿಕ ತಮ್ಮ ನೇತ್ರದಾನ ಮಾಡಿದ್ದರು. ಇದರಿಂದಾಗಿ ನಾಲ್ವರು ಅಂಧರ ಬಾಳು ಬೆಳಕಾಗಿತ್ತು. ಇದೇ ಪ್ರೇರಣೆಯಿಂದ ಹಲವರು ಸ್ವಯಂಪ್ರೇರಿತರಾಗಿ ನೇತ್ರದಾನಕ್ಕೆ ಮುಂದೆ ಬರುತ್ತಿದ್ದಾರೆ.

ಇದೀಗ ಪುನೀತ್ ಪ್ರೇರಣೆಯಿಂದ ದಾವಣಗೆರೆಯ ಚಟ್ಟೋಬನಹಳ್ಳಿ ತಾಂಡದ ಸುಮಾರು 60 ಮಂದಿ ನೇತ್ರದಾನದ ಪ್ರತಿಜ್ಞೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ