ಡಾ. ರಮಣ ರಾವ್ ಮನೆಗೆ ಪೊಲೀಸ್ ಭದ್ರತೆ
ಪುನೀತ್ ಸಾವಿನ ಬಗ್ಗೆ ಅನುಮಾನವಿದೆ ಎಂದು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದ ಅಭಿಯಾನಿ ಅರುಣ್ ಪರಮೇಶ್ವರ್ ಇದೀಗ ಪುನೀತ್ ಸಾವಿಗೆ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಡಾ.ರಮಣ್ ರಾವ್ ನಿವಾಸಕ್ಕೆ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.ಡಾಕ್ಟರ್ ರಮಣರಾವ್ ನನ್ನು ಈ ಕೂಡಲೇ ಬಂಧಿಸುವಂತೆ ಸದಾಶಿವನಗರ ಪೊಲೀಸ್ ಠಾಣೆಗೆ ಅಭಿಮಾನಿ ದೂರು ದಾಖಲಿಸಿದ್ದರು. ಪುನೀತ್ ಕ್ಲಿನಿಕ್ ಗೆ ಚಿಕಿತ್ಸೆಗೆ ಹೋಗಿದ್ದಾಗ ವೈದ್ಯ ಡಾ, ರಮಣರಾವ್ ಬೇಜವ್ದಾರಿಯಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡದೆ, ಹತ್ತಿರದಲ್ಲಿರುವ ಆಸ್ಪತ್ರೆಗೆ ಹೋಗಲು ಸಲಹೆ ನೀಡಿದ್ದಾರೆ ಎಂದು ದೂರು ನೀಡಿದ್ದಾರೆ. ಹೀಗಾಗಿ ಡಾಕ್ಟರ್ ಹೇಳಿಕೆ ಬಗ್ಗೆ ಹಲವು ಗೊಂದಲಗಳಿವೆ, ಬರೀ ಮಾತಲ್ಲೇ ಹೇಳೋದು ಬೇಕಿಲ್ಲ, ಸಿಸಿಟಿವಿ ಫೂಟೇಜ್ ಗಳನ್ನ ಮಾಧ್ಯಮಗಳಿಗೆ ರಿವೀಲ್ ಮಾಡಬೇಕು, ಎಲ್ಲದಕ್ಕೂ ಉತ್ತರ ಸಿಗುತ್ತೆ ಎಂದು ಅರುಣ್ ಪರಮೇಶ್ವರ್ ಕಿಡಿ ಕಾರಿದ್ದಾರೆ. ಈ ಹಿನ್ನೆಲೆ ವೈದ್ಯರ ನಿವಾಸಕ್ಕೆ ಪುನೀತ್ ಅಭಿಮಾನಿಗಳು ಮುತ್ತಿಗೆ ಹಾಕಬಹುದು ಹೀಗಾಗಿ ವೈದ್ಯರ ಮನೆಯ ಸುತ್ತಾಮುತ್ತಾ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈಗಾಗಲೇ ರಮಣರಾವ್ ವಿರುದ್ಧ ಕೆಲವು ಕನ್ನಡ ಪರ ಸಂಘಟನೆಗಳು ದೂರು ನೀಡಿದ್ದು, ಡಾ.ರಮಣ ರಾವ್ ವಿರುದ್ಧ ಅಪ್ಪು ಅಭಿಮಾನಿ ಅರುಣ್ ಪರಮೇಶ್ವರ್ ಕೂಡ ಗುಡುಗಿದ್ದಾನೆ.