ಕೊರೋನಾ ಭೀತಿ: ಹುಟ್ಟುಹಬ್ಬ ಆಚರಿಸದೇ ಇರಲು ಪುನೀತ್ ರಾಜಕುಮಾರ್ ತೀರ್ಮಾನ
‘ಎಲ್ಲಾ ಅಭಿಮಾನಿ ದೇವರಿಗೆ ನನ್ನ ನಮಸ್ಕಾರ. ಈ ವರ್ಷ ಮಾರ್ಚ್ 17 ಕ್ಕೆ ನಾನು ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ. ಹಾಗಾಗಿ ಯಾರೂ ಈ ವರ್ಷ ನನ್ನ ಮನೆ ಹತ್ರ ಬೇರೆ ಬೇರೆ ಊರುಗಳಿಂದ ಬರಬೇಡಿ. ನಾನು ಮನೆಯಲ್ಲೂ ಇರಲ್ಲ. ಇಡೀ ವಿಶ್ವದಲ್ಲೇ ಈಗ ಏನು ತೊಂದರೆ ನಡೆಯುತ್ತಿದೆ, ಅದಕ್ಕೆ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ನಾನೂ ಕೈಜೋಡಿಸುತ್ತೇನೆ. ನಿಮ್ಮ ಪ್ರೀತಿ ವಿಶ್ವಾಸ ಹೀಗೇ ಇರುತ್ತದೆ ಎಂದು ನಾನು ಭಾವಿಸಿದ್ದೇನೆ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಪುನೀತ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ನೀಡಿದ್ದಾರೆ.