ಹೋಂ ಬ್ಯಾನರ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರ

ಗುರುವಾರ, 29 ಆಗಸ್ಟ್ 2019 (09:03 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಹೋಂ ಬ್ಯಾನರ್ ನಡಿಯಲ್ಲಿ ನಿರ್ಮಿಸುತ್ತಿರುವ ಹೊಸಬರ ಸಿನಿಮಾವೊಂದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

ಕವಲು ದಾರಿ ಬಳಿಕ ತಮ್ಮ ಪ್ರೊಡಕ್ಷನ್ ಸಂಸ್ಥೆಯಿಂದ ಪುನೀತ್ ಮಾಯಾಬಜಾರ್ ಎಂಬ ಸಿನಿಮಾವೊಂದನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ವಸಿಷ್ಠ ಸಿಂಹ, ಚೈತ್ರಾ ರಾವ್ ಮುಂತಾದವರು ನಟಿಸುತ್ತಿದ್ದಾರೆ.

ಈ ಸಿನಿಮಾದಲ್ಲಿ ಪುನೀತ್ ಅತಿಥಿ ಪಾತ್ರವೊಂದನ್ನು ನಟಿಸಲಿದ್ದಾರೆ ಎಂಬ ಮಾಹಿತಿ ಬಂದಿದೆ. ಅದೂ ಹಾಡೊಂದರಲ್ಲಿ ಪುನೀತ್ ಅಭಿನಯಿಸಲಿದ್ದಾರಂತೆ. ಅಂದ ಹಾಗೆ ಮಾಯಾಬಜಾರ್ ಸಿನಿಮಾವನ್ನು ಈ ವರ್ಷಾಂತ್ಯಕ್ಕೆ ಬಿಡುಗಡೆ ಮಾಡಲು ಪ್ರಯತ್ನಿಸುವುದಾಗಿ ಪುನೀತ್ ಈ ಮೊದಲು ಹೇಳಿಕೊಂಡಿದ್ದರು. ಈಗ ತಮ್ಮ ಹೋಂ ಬ್ಯಾನರ್ ಸಿನಿಮಾದ ಕಳೆ ಹೆಚ್ಚಿಸಲು ತಾವೇ ಮುಂದಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ