ಕಿರುತೆರೆಯಲ್ಲಿ ಪುನೀತ್ ರಾಜ್ ಕುಮಾರ್ ಹೊಸ ರಿಯಾಲಿಟಿ ಶೋ

ಶುಕ್ರವಾರ, 6 ಅಕ್ಟೋಬರ್ 2017 (08:34 IST)
ಬೆಂಗಳೂರು: ಕೌನ್ ಬನೇಗಾ ಕರೋಡ್ ಪತಿ ಕನ್ನಡ ಅವತರಣಿಕೆ ಕನ್ನಡದ ಕೋಟ್ಯಾಧಿಪತಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತೊಂದು ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಮರಳಲಿದ್ದಾರೆ.

 
ಆದರೆ ಈ ಬಾರಿ ಪುನೀತ್ ಕಾಣಿಸಿಕೊಳ್ಳುತ್ತಿರುವುದು ಕಲರ್ಸ್ ವಾಹಿನಿಯಲ್ಲಿ. ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಹೊಸ ರಿಯಾಲಿಟಿ ಶೋನ ಟೀಸರ್ ಪ್ರಸಾರ ಮಾಡುತ್ತಿದೆ. ಆದರೆ ಇದರ ಟೈಟಲ್ ಏನೆಂದು ಬಿಟ್ಟುಕೊಟ್ಟಿಲ್ಲ.

ಮೂಲಗಳ ಪ್ರಕಾರ ಪುನೀತ್ ಗೇಮ್ ಶೋ ಒಂದರ ನಿರೂಪಕರಾಗಲಿದ್ದಾರೆ. ಈ ಮೊದಲು ಗೋಲ್ಡನ್ ಸ್ಟಾರ್ ಗಣೇಶ್ ಕಲರ್ಸ್ ವಾಹಿನಿಗೆ ಸೂಪರ್ ಮಿನಿಟ್ ಎಂಬ ಗೇಮ್ ಶೋ ನಿರೂಪಿಸುತ್ತಿದ್ದರು. ಇದೀಗ ಪುನೀತ್ ಸರದಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ