ಅಣ್ಣ ಶಿವರಾಜಕುಮಾರ್ ಸಿನಿಮಾಗೆ ತಮ್ಮ ಪುನೀತ್ ಸಾಥ್

ಭಾನುವಾರ, 23 ಫೆಬ್ರವರಿ 2020 (09:01 IST)
ಬೆಂಗಳೂರು: ಶಿವರಾಜಕುಮಾರ್ ಸಿನಿಮಾ ದ್ರೋಣ ಇನ್ನೇನು ತೆರೆಗೆ ಬರಲು ಸಿದ್ಧವಾಗಿದ್ದು, ಈ ಸಿನಿಮಾ ಅಡಿಯೋ ರಿಲೀಸ್ ಗೆ ತಮ್ಮ ಪುನೀತ್ ರಾಜಕುಮಾರ್ ಸಾಥ್ ನೀಡಲಿದ್ದಾರೆ.


ಇಂದು ಅಂದರೆ ಫೆಬ್ರವರಿ 23 ರಂದು ‘ದ್ರೋಣ’ ಸಿನಿಮಾದ ಅಡಿಯೋ ರಿಲೀಸ್ ಹಾಗೂ ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ಪವರ್ ಸ್ಟಾರ್ ಪುನೀತ್ ಕೈಯಲ್ಲಿ ಮಾಡಿಸಲು ಚಿತ್ರತಂಡ ತೀರ್ಮಾನಿಸಿದೆ.

ಪ್ರಮೋದ್ ಚಕ್ರವರ್ತಿ ನಿರ್ದೇಶನದ ಈ ಸಿನಿಮಾ ಮಾರ್ಚ್ 6 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಶಿವರಾಜಕುಮಾರ್ ಜತೆಗೆ ಇನಿಯಾ, ರಂಗಾಯಣ ರಘು ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ