ಪುನೀತ್ ರಾಜಕುಮಾರ್ ಬೆನ್ನೇರಿದ ಆ ಬೇತಾಳ ಯಾವುದು ಗೊತ್ತಾ?!

ಬುಧವಾರ, 1 ಜನವರಿ 2020 (10:20 IST)
ಬೆಂಗಳೂರು: ಹೊಸ ವರ್ಷಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವರತ್ನ ಸಿನಿಮಾದ ಪೋಸ್ಟರ್ ನೋಡಿ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.


ಪುನೀತ್ ಅಭಿನಯದ ಯುವರತ್ನ ಸಿನಿಮಾದ ಎರಡನೇ ಪೋಸ್ಟರ್ ಹೊಸ ವರ್ಷದ ದಿನವಾದ ಇಂದು ಬಿಡುಗಡೆಯಾಗಿದೆ. ಈ ಪೋಸ್ಟರ್ ನಲ್ಲಿ ಪುನೀತ್ ಅಸ್ಥಿಪಂಜರವನ್ನು ಹೆಗಲಿಗೇರಿಸಿ ತೀಕ್ಷ್ಣವಾಗಿ ನೋಡುವ ಪೋಸ್ ಇದೆ.

ಇದನ್ನು ನೋಡಿ ಅಭಿಮಾನಿಗಳು ಯುವರತ್ನ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಪೋಸ್ಟರ್ ನ ಹಿನ್ನಲೆಯಲ್ಲಿ ಡೈನಾಸರ್ ನ ಚಿತ್ರವೂ ಇದೆ.  ಟೀಸರ್ ನಲ್ಲಿ ಅಪ್ಪು ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ