ಕೃಷ್ಣ ಲೀಲ ಚಿತ್ರ ಶೂಟಿಂಗ್ ಈಗ ಬಹುತೇಕ ಪೂರ್ಣಗೊಂಡಿದ್ದು, ಪುನೀತ್ ಹಾಡಿರುವ ಹಾಡನ್ನು ಆಕಾಶ್ ಸ್ಟುಡಿಯೋ ದಲ್ಲಿ ಮುದ್ರಿಸಲಾಯಿತು. ಪುನೀತ್ ರಾಜ್ ಕುಮಾರ್ ಹಾಡನ್ನು ಹಾಡುವ ಸಮಯದಲ್ಲಿ ರಾಘವೇಂದ್ರ ರಾಜ್ ಕುಮಾರ್ ಉಪಸ್ಥಿತರಿದ್ದರು. ಈ ಚಿತ್ರದಲ್ಲಿ ಆರು ಹಾಡುಗಳಿದ್ದು ಆಡಿಯೋ ನವೆಂಬರ್ ಎರಡನೇ ವಾರದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.
ಈ ಚಿತ್ರದಲ್ಲಿ ಮಯೂರಿ ಮುಖ್ಯ ಪಾತ್ರಧಾರಿಯಾಗಿದ್ದಾರೆ. ಕೃಷ್ಣ ಲೀಲಾ ಚಿತ್ರದ ನಿರ್ಮಾಣ ಅಜಯ್ ಕೃಷ್ಣ ರಾವ್ ಮಾಡಿದ್ದಾರೆ. ರಂಗಾಯಣ ರಘು, ಅಚ್ಯುತ್ ಕುಮಾರ್, ಶೋಭರಾಜ್, ತಬಲಾ ನಾಣಿ, ಬುಲೆಟ್ ಪ್ರಕಾಶ್ ಮುಂತಾದವರಿದ್ದಾರೆ.