'ರಾಕೆಟ್'ನಲ್ಲಿ ಗಾನಸುಧೆ ಹರಿಸಲಿರುವ ಪುನೀತ್ ರಾಜ್

ಬುಧವಾರ, 6 ಮೇ 2015 (10:07 IST)
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ನಟನೆಯ ಜೊತೆ ಜೊತೆ ಬೇರೆ ಕಲಾವಿದರು ಅಭಿನಯಿಸಿರುವ ಚಿತ್ರಗಳಲ್ಲಿ ಸಹಿತ ಹಾಡಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಈಗ ನೀನಾಸಂ ಸತೀಶ್ ಅಭಿನಯದ ರಾಕೆಟ್ ಚಿತ್ರದಲ್ಲಿ ಹಾಡಲು ಸಮ್ಮತಿ ಮುದ್ರೆ ದೊರಕಿದೆ ಪುನೀತ್ ಅವರ ಕಡೆಯಿಂದ. ಸತೀಶ್ ಪಿಕ್ಚರ್ ಹೌಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ರಾಕೆಟ್ ಚಿತ್ರ ಸತೀಶ್ ಅವರ ಹೋಂ ಬ್ಯಾನರ್ ಚಿತ್ರ. 
ರಾಕೆಟ್ ಚಿತ್ರದ ಪ್ರಮುಖ ಹಾಡನ್ನು ಈ ಚಿತ್ರದ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಹಾಗೂ ನಟ ನಿರ್ಮಾಪಕ ಪುನೀತ್ ರಾಜ್ ಕುಮಾರ್ ಅವರೇ ಹಾಡಬೇಕು ಎಂದು ಬಯಸಿದ ಕಾರಣ ಅವರು ಪುನೀತ್ ಅವರ ಬಗ್ಗೆ ತಮ್ಮ ಕೋರಿಕೆ ಇಟ್ಟರಂತೆ. ನಟನೆಯ ಜೊತೆಗೆ ಹಾಡುವುದಕ್ಕೂ ಸಹಿತ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಈಗ ಆ ಹಾಡು ಪುನೀತ್ ಕಂಠಸಿರಿಯಿಂದ ಹೊರ ಬರಲಿದೆ.ಈ ಹಾಡನ್ನು ಸದ್ಯದಲ್ಲೇ ಪುನೀತ್ ಹಾಡಲಿದ್ದಾರೆ. 

ವೆಬ್ದುನಿಯಾವನ್ನು ಓದಿ