ಮಿಲನಾ- ಕೃಷ್ಣ ದಂಪತಿಯ ಮನೆಗೆ ಪುಟ್ಟಗೌರಿ ಎಂಟ್ರಿ: ಮುಖ ರಿವಿಲ್‌ ಮಾಡಿದ ತಾರಾ ಜೋಡಿ

Sampriya

ಶುಕ್ರವಾರ, 27 ಸೆಪ್ಟಂಬರ್ 2024 (19:43 IST)
Photo Courtesy X
ಬೆಂಗಳೂರು: ಈಚೆಗೆಷ್ಟೇ ಹೆಣ್ಣು ಮಗುವಿಗೆ ಜನ್ಮನೀಡಿದ ನಟಿ ಮಿಲನಾ ನಾಗರಾಜ್‌ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಪುಟ್ಟಗೌರಿಯನ್ನು ಅದ್ದೂರಿಯಾಗಿ ಮನೆಗೆ ಸ್ವಾಗತಿಸುವ ವಿಡಿಯೊವನ್ನು ಇಂದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ.

ಸೆ.5ರಂದು ಮಿಲನಾ ಅವರು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮನೀಡಿದ್ದರು. ಆ ಕಂದಮ್ಮಗೆ ನಟ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ದಂಪತಿ  ಪರಿ ಎಂದು ನಾಮಕರಣ ಮಾಡಿದ್ದಾರೆ. ಇದೇ ವೇಳೆ ಮಗುವಿನ ಮುಖವನ್ನು ರಿವಿಲ್‌ ಮಾಡಿದ್ದು, ಪುಟ್ಟಗೌರಿಯನ್ನು ನೋಡಿ ಅಭಿಮಾನಿಗಳು ತುಂಬು ಹೃದಯದಿಂದ ಹಾರೈಸಿದ್ದಾರೆ.

ಸೆಲೆಬ್ರೆಟಿಗಳ ಪೈಕಿ ಕೆಲವರಷ್ಟೇ ತಮ್ಮ ಮಗುವಿನ ಮುಖವನ್ನು ರಿವಿಲ್‌ ಮಾಡಿದ್ದಾರೆ. ಅವರಲ್ಲಿ ನೀವು ಒಬ್ಬರು ಎಂದು ಅಭಿಮಾನಿಯೊಬ್ಬರು ಕಮೆಂಟ್‌ ಮಾಡಿದ್ದಾರೆ.

ವಿಡಿಯೊದಲ್ಲಿ ಪರಿ ಜೊತೆ ಮಿಲನಾ ಅವರ ಮುದ್ದು ನಾಯಿಮರಿ ರೊಮಿಯೊ ಸಂಭ್ರಮಿಸುವುದು ಕಾಣಿಸುತ್ತಿದೆ. ಡಾರ್ಲಿಂಗ್‌ ಕೃಷ್ಣ ಕೂಡ ಮಗುವನ್ನು ಎತ್ತಿಕೊಂಡು ಮುದ್ದಾಡುತ್ತಿರುವುದು ಕಾಣಬಹುದು. ವಿಡಿಯೊ ನೋಡಿದ ನೆಟ್ಟಿಗರು ಮಗಳಿಗೆ ಮೊದಲು ದೃಷ್ಟಿ ತೆಗೆಯುವಂತೆ ಸಲಹೆ ನೀಡಿದ್ದಾರೆ.

ಲವ್‌ಮಾಕ್ಟೆಲ್‌ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯವಾಗಿರುವ ಕೃಷ್ಣ ಮತ್ತು ಮಿಲನಾ ಅವರು ಬಳಿಕ ಪ್ರೀತಿಗೆ ಬಿದ್ದಿದ್ದರು. ಈ ತಾರಾ ಜೋಡಿ 2021ರಲ್ಲಿ ಹಸೆಮಣೆಗೆ ಏರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ