ಪುಟ್ಟಕ್ಕನ ಮಕ್ಕಳು ಧಾರವಾಹಿಯ ನಾಯಕ ಕಂಠಿಗೆ ಬಂತು ರಾಕಿಂಗ್ ಸ್ಟಾರ್ ಯಶ್ ರಿಂದ ಸರ್ಪ್ರೈಸ್

Krishnaveni K

ಶುಕ್ರವಾರ, 9 ಆಗಸ್ಟ್ 2024 (13:53 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರವಾಹಿಯ ನಾಯಕ ನಟ ಕಂಠಿ ಅಲಿಯಾಸ್ ನಟ ಧನುಷ್ ಗೆ ಸ್ವತಃ ರಾಕಿಂಗ್ ಸ್ಟಾರ್ ಯಶ್ ಕರೆ ಮಾಡಿ ಅಭಿನಂದಿಸಿದ್ದಾರೆ.

ಕಂಠಿ ಈಗ ಜೀ ಕನ್ನಡದ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ. ಈ ಬಾರಿ ಡ್ಯಾನ್ಸ್ ಬರದೇ ಇರುವವರನ್ನು ಶೋನ ಸ್ಪರ್ಧಿಗಳಾಗಿ ಮಾಡಲಾಗಿದೆ. ಕಳೆದ ವಾರ ಕೆಜಿಎಫ್ ಸಿನಿಮಾದ ಸಲಾಂ ರಾಕಿ ಭಾಯ್ ಹಾಡಿಗೆ ಕಂಠಿ ಭರ್ಜರಿ ಮಾಸ್ ಡ್ಯಾನ್ಸ್ ಮಾಡಿದ್ದರು.

ಈ ಡ್ಯಾನ್ಸ್ ತೀರ್ಪುಗಾರರಿಗೆ ಭಾರೀ ಮೆಚ್ಚುಗೆಯಾಗಿತ್ತು. ಕಂಠಿ ಥೇಟ್ ಯಶ್ ಸ್ಟೈಲ್ ನಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ್ದರು. ಇದನ್ನು ನೋಡಿ ಇಂಪ್ರೆಸ್ ಆದ ತೀರ್ಪುಗಾರರಾದ ನಟ ಶಿವರಾಜ್ ಕುಮಾರ್ ಈ ಡ್ಯಾನ್ಸ್ ನ್ನು ಯಶ್ ಗೆ ತೋರಿಸುವುದಾಗಿ ಹೇಳಿದ್ದರು. ಮೊದಲೇ ಕಂಠಿ ನಿಜ ಜೀವನದಲ್ಲೂ ಯಶ್ ಫ್ಯಾನ್. ಹೀಗಾಗಿ ಶಿವಣ್ಣ ಮಾತು ಕೇಳಿ ಖುಷಿಯಾಗಿದ್ದರು.

ಈ ವಾರ ಆ ಕನಸನ್ನು ಶಿವಣ್ಣ ನನಸು ಮಾಡಿದ್ದಾರೆ. ತಾವು ಹೇಳಿದಂತೇ ಯಶ್ ಗೆ ಕಂಠಿ ಡ್ಯಾನ್ಸ್ ನ್ನು ತೋರಿಸಿದ್ದಾರೆ. ಹೀಗಾಗಿ ಈ ವಾರದ ಶೋನಲ್ಲೇ ಯಶ್ ಕರೆ ಮಾಡಿ ಕಂಠಿಗೆ ಅಭಿನಂದಿಸುತ್ತಿದ್ದಾರೆ. ‘ನಮಸ್ತೆ ಕಂಠಿ ನಿಮ್ಮ ಡ್ಯಾನ್ಸ್ ನೋಡಿದೆ. ನಿಮ್ಮ ಪರ್ಫಾರ್ಮೆನ್ಸ್ ನಾನು ನೋಡಿ ತುಂಬಾ ಅದ್ಭುತವಾಗಿ ಮಾಡಿದ್ದೀರಿ.  ಬೆಳಿವಾಗ ನಮಗೆ ಯಾರು ಬೆನ್ನು ತಟ್ಟುತ್ತಾರೆ ಎನ್ನುವುದು ಮುಖ್ಯ. ಶಿವಣ್ಣ ನಮಗೆಲ್ಲರಿಗೂ ಸ್ಪೂರ್ತಿ. ನಮ್ಮನ್ನೆಲ್ಲಾ ಮೀರಿ ನೀವು ಬೆಳೆದು ಕನ್ನಡ ತಾಯಿಯನ್ನು ಗೌರವಿಸುವ ಹಾಗೆ ಆಗಬೇಕು. ಅದುವೇ ನೀವು ನಮಗೆ ಕೊಡುವ ಗೌರವ’ ಎಂದು ಹಾರೈಸಿದ್ದಾರೆ. ಯಶ್ ಧ್ವನಿ ಕೇಳಿ ಖುಷಿಯಾಗುವ ಕಂಠಿ ವೇದಿಕೆ ಮೇಲಿನಿಂದಲೇ ಅವರಿಗೆ ಶಿರಸಾ ನಮಸ್ಕಾರ ಮಾಡುತ್ತಾರೆ.

ಈ ಹಿಂದೆ ರಾಧಿಕಾ ಪಂಡಿತ್ ಕೂಡಾ ಕಂಠಿ ಅಭಿನಯ, ಮ್ಯಾನರಿಸಂ ಮೆಚ್ಚಿ ಅವರನ್ನು ಕರೆಸಿ ಅಭಿನಂದಿಸಿದ್ದರಂತೆ. ಇದನ್ನು ಸ್ವತಃ ಪುಟ್ಟಕ್ಕನ ಮಕ್ಕಳು ಧಾರವಾಹಿ ನಿರ್ದೇಶಕ ಆರೂರು ಜಗದೀಶ್ ಬಹಿರಂಗಪಡಿಸಿದ್ದರು. ಇದೀಗ ಯಶ್ ಕೈಯಲ್ಲಿ ಕಂಠಿ ಹೊಗಳಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ