ಐಶ್ವರ್ಯ ರೈ-ಅಭಿಷೇಕ್ ನಡುವೆ ಜಟಾಪಟಿ

ಬುಧವಾರ, 28 ಜನವರಿ 2015 (10:35 IST)
ಬಾಲಿವುಡ್ ನಲ್ಲಿ ಸುಖಾಸುಮ್ಮನೆ ಸುದ್ದಿ ಹರಡುವ ವಿಷಯದಲ್ಲಿ ಮೊದಲಿರುತ್ತಾರೆ ಅಲ್ಲಿನ ನಿವಾಸಿಗಳು. ಉಡ್ಡೆ ನೋಡಿದ್ರೆ ಗುಡ್ಡ ಅಂತಾರೆ, ಗುಡ್ಡ ನೋಡಿದ್ರೆ ಮಹಾ ಪರ್ವತ ಎಂದು ಹರಡುತ್ತಾರೆ. ಈಗ ಹಾಗೆ ಆಗಿದೆ ಐಶ್ವರ್ಯ ರೈ ಬಚ್ಚನ್ ಮತ್ತು ಅಭಿಷೇಕ್   ಬಚ್ಚನ್ ವಿಷಯದಲ್ಲೂ. ಅವರಿಬ್ಬರ   ನಡುವೆ ಈಗ ಗಲಾಟೆ ಆರಂಭವಾಗಿದೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಜೀವಂತವಾಗಿದೆ. ಅದು ಈಗ ಹೆಚ್ಚು ಹೆಚ್ಚು ಆದ್ಯತೆ ಗಳಿಸಿ ಕೊಂಡಿದೆ. 

ತನ್ನ ಮುದ್ದಿನ ಮಗಳು ಆರಾಧ್ಯಳಿಗಾಗಿ ಇಷ್ಟು ವರ್ಷಗಳ ಕಾಲ ಐಶ್ವರ್ಯ ಸಿನಿಮಾ ರಂಗದಿಂದ ದೂರ ಇದ್ದರು. ಈಗ ಆಕೆ ತನ್ನ ಎರಡನೇ ಇನ್ನಿಂಗ್ಸ್ ಆರಂಭ ಮಾಡುತ್ತಿದ್ದಾರೆ. ಅಂತಹುದರಲ್ಲಿ ಇದ್ದಕ್ಕಿದ್ದಂತೆ ಏನಾಯ್ತು ಎಂದು ಕಾಡುವುದು ಸಹಜ. ಆದರೆ ವಿಷಯ ಅದಲ್ಲ ಈಗ ಆಕೆ ಎ ದಿಲ್ ಹೈ ಮುಷ್ಕಿಲ್ ಎನ್ನುವ ಚಿತ್ರದಿಂದ ಮತ್ತೊಂದು ಇನ್ನಿಂಗ್ಸ್ ಆರಂಭ ಮಾಡುತ್ತಿದ್ದಾರೆ.
 
ಈ ಸೌಂದರ್ಯ ದೇವತೆ ರೀ ಎಂಟ್ರಿ ನೀಡುತ್ತಿರುವ ಈ ಸಿನಿಮಾ ಮತ್ತು ಆಕೆಯ ಪತಿ ಅಭಿಷೇಕ್ ಬಚ್ಚನ್ ಅವರ ಅಭಿನಯದ ಚಿತ್ರ ಹೌಸ್ ಫುಲ್ 3  ಸಹಿತ ಒಂದೇ ಬಾರಿ ಬಾಕ್ಸಾಫೀಸ್ ಮುಂದೆ ಬರುತ್ತಿದೆಯಂತೆ. ಈ ಎರಡು ಚಿತ್ರ 2016  ರಲ್ಲಿ ಬಿಡುಗಡೆ ಆಗಲಿದೆ. ಆ ಕ್ಲಾಶ್ ಬಗ್ಗೆ ಅವರು ಮಾತಾಡಿದ್ರೆ ಬೇರೆ ಕ್ಲಾಶ್ ಎಂದು ಜನ ಮಾತಾಡುತ್ತಿದ್ದಾರೆ. ಗಾಸಿಪ್ ಲೋಕದಲ್ಲಿ ಹೀಗೆಲ್ಲಾ ಉಂಟು ! 
 

ವೆಬ್ದುನಿಯಾವನ್ನು ಓದಿ