ಪುಷ್ಕಕ ವಿಮಾನವೇರಿದ ನಟಿ ರಚಿತಾ ರಾಮ್

ಶುಕ್ರವಾರ, 12 ಫೆಬ್ರವರಿ 2016 (11:39 IST)
ಬುಲ್ ಬುಲ್ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟು ಭರವಸೆ ಮೂಡಿಸಿದ ನಟಿ ರಚಿತಾ ರಾಮ್. ಮೊನ್ನೆಯಷ್ಟೇ ರಥಾವರ ಸಿನಿಮಾದ ಮೂಲಕ ಅಭಿಮಾನಿಗಳ ದಿಲ್ ಕದ್ದಿದ್ದ ಈ ನಟಿ ಇದೀಗ ಪುಷ್ಕಕ ವಿಮಾನವೇರಿ ಅಭಿಮಾನಿಗಳಿಗೆ ಮತ್ತೊಂದು ಸಂತಷ ನೀಡಿದ್ದಾರೆ. ಹೌದು.. ರಮೇಶ್ ಅರವಿಂದ್ ಅಭಿನಯದ 'ಪುಷ್ಪಕ ವಿಮಾನ' ಈಗಾಗಲೇ ತನ್ನ ಟ್ರೇಲರ್ ನಿಂದ ಸುದ್ದಿ ಮಾಡುತ್ತಿದೆ. ಇಷ್ಟು ದಿನ ಸಿನಿಮಾದಲ್ಲಿ ಜೂಹಿ ಚಾವ್ಲಾ ಅವರು ಅಭಿನಯಿಸುತ್ತಾರೆ ಅಂತಾ ಸುದ್ದಿಯಾಗಿತ್ತು.ಆದ್ರೆ ಜೂಹಿ ಎಂಟ್ರಿಯಾಗೋದಕ್ಕೆ ಮೊದಲೇ ಕನ್ನಡದ ಮುದ್ದು ನಟಿಯೊಬ್ಬರು ಸಿನಿಮಾಕ್ಕೆ ಆಗಮಿಸಿದ್ದಾರೆ,.

ರಚಿತಾ ರಾಮ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ  ರಚಿತಾ, ರಮೇಶ್ ಅರವಿಂದ್ ಅವರ ಮಗಳಾಗಿ ಅಭಿನಯಿಸುತ್ತಿದ್ದಾರಂತೆ. ಇಲ್ಲಿ ರಮೇಶ್ ಎರಡು ವಿಭಿನ್ನ ವಯೋಮಾನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರ ಮಗಳ ಪಾತ್ರದಲ್ಲಿ ಮಾತ್ರ ಇಬ್ಬರು ಕಲಾವಿದರು ಅಭಿನಯಿಸುತ್ತಿದ್ದು, ಚಿಕ್ಕ ಹುಡುಗಿಯಾಗಿದ್ದಾಗ ಯುವಿನಾ ಅಭಿನಯಿಸಿದರೆ, ದೊಡ್ಡ ಹುಡುಗಿಯಾದಾಗ ರಚಿತಾ ರಾಮ್  ಕಾಣಿಸಿಕೊಳ್ಳುತ್ತಿದ್ದಾರೆ.     
                
ಈಗಾಗಲೇ ರಚಿತಾ ರಾಮ್ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಒಪ್ಪಿದ್ದು, ಸದ್ಯದಲ್ಲೇ ಚಿತ್ರೀಕರಣದ ಭಾಗವಹಿಸಲಿದ್ದಾರೆ. 'ಪುಷ್ಪಕ ವಿಮಾನ' ಚಿತ್ರದ ಅರ್ಧದಷ್ಟು ಚಿತ್ರೀಕರಣ ಮುಗಿದಿದೆ. ಇತ್ತೀಚೆಗೆ ರಮೇಶ್, ರವಿ ಕಾಳೆ ಮುಂತಾದವರು ಅಭಿನಯಿಸಿದ ಕೆಲವು ದೃಶ್ಯಗಳನ್ನು ವಿಶೇಷ ಸೆಟ್ವೊಂದರಲ್ಲಿ ಚಿತ್ರೀಕರಣ ಮಾಡಲಾಗಿದೆ.
 

ವೆಬ್ದುನಿಯಾವನ್ನು ಓದಿ