ಹೊಸ ಸಿನಿಮಾ ಒಪ್ಪಿಕೊಂಡ ಡಿಂಪಲ್ ಕ್ವೀನ್ ರಚಿತಾ ರಾಮ್

ಶುಕ್ರವಾರ, 7 ಆಗಸ್ಟ್ 2020 (11:46 IST)
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯುಸಿ ಹೀರೋಯಿನ್ ಆಗುತ್ತಿದ್ದಾರೆ. ರಚಿತಾ ಕೈಯಲ್ಲಿ ಈಗ ಸಾಲು ಸಾಲು ಸಿನಿಮಾಗಳಿವೆ. ಅದರ ಜತೆಗೆ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ.


ರಚಿತಾ ಈಗಾಗಲೇ ಏಕ್ ಲವ್ ಯಾ, ಏಪ್ರಿಲ್, ಲಿಲ್ಲಿ, ವೀರಂ ಎನ್ನುವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರ ಜತೆಗೆ ಈಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ.

ಈ ಸಿನಿಮಾಗೆ ಇನ್ನೂ ಟೈಟಲ್ ಇಟ್ಟಿಲ್ಲ. ಆದರೆ ಇದು ತಮಿಳಿನ ‘ಕೊಲಮಾಮ ಕೋಕಿಲ’ ಎನ್ನುವ ಸಿನಿಮಾದ ರಿಮೇಕ್ ಎನ್ನುವುದು ಗೊತ್ತಾಗಿದೆ. ತಮಿಳಿನಲ್ಲಿ ನಯನತಾರಾ ಮಾಡಿದ್ದ ಪಾತ್ರವನ್ನು ರಚಿತಾ ಮಾಡಲಿದ್ದಾರೆ.  ಮಯೂರ್ ರಾಘವೇಂದ್ರ ಈ ಸಿನಿಮಾದ ನಿರ್ದೇಶಕರು. ಅಕ್ಟೋಬರ್ ವೇಳೆಗೆ ಚಿತ್ರ ಸೆಟ್ಟೇರುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ