ಅಂದು ನಿನಗಾಗಿ ಇಂದು ನಿಮಗಾಗಿ ಇದು ರಾಧಿಕ-ವಿಜಯ್ ಪರಿಣಯ

ಶುಕ್ರವಾರ, 14 ನವೆಂಬರ್ 2014 (13:28 IST)
ನಿನಗಾಗಿ  ಮುಖಾಂತರ ಒಂದಾದ ಜೋಡಿ ವಿಜಯ್ ರಾಘವೇಂದ್ರ ಮತ್ತು ರಾಧಿಕ ಕುಮಾರಸ್ವಾಮಿ. ನಿನಗಾಗಿ ಸಿನಿಮಾ ಹಾಡುಗಳು ಸಹಿತ ಹೆಚ್ಚು ಜನಪ್ರಿಯತೆಗಳಿಸಿತ್ತು.ಈಗ ಈ ಜೋಡಿ ಮತ್ತೆ ಒಂದಾಗಿದ್ದಾರೆ ನಿಮಗಾಗಿ ಚಿತ್ರದಮೂಲಕ. ಈ ಚಿತ್ರವನ್ನು ರಘುರಾಮ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ನಿರ್ಮಾಣ ಮಾಡುತ್ತಿರುವವರು  ಕೃಷ್ಣ . ಚಿತ್ರದ ಶೂಟಿಂಗ್ ಅನ್ನು ಮಲೇಶಿಯಾ, ಸಿಂಗಾಪೂರ್ ಮತ್ತು ಬ್ಯಾಂಕಾಕ್ ನಲ್ಲಿ ಮಾಡುತ್ತಿದ್ದಾರೆ. 
 
ನಮಗಾಗಿ ಚಿತ್ರದಲ್ಲಿ ರಾಧಿಕ  ಮತ್ತು ವಿಜಯ್  ರಾಘವೇಂದ್ರ ಪ್ರೇಮಿಗಳಾಗಿ ಅಲ್ಲ ಪತಿಪತ್ನಿಯರಾಗಿ ಅಭಿನಯಿಸುತ್ತಿದ್ದಾರೆ. ಇದರಲ್ಲಿ ರಾಧಿಕ ಬಿಟಿ ಕಂಪನಿಯಲ್ಲಿ   ಕೆಲಸ ಮಾಡುತ್ತಿದ್ದರೆ, ವಿಜಯ್ ರಾಘವೇಂದ್ರ ಐಟಿ ಕಂಪನಿಯ ಸದಸ್ಯರಾಗಿದ್ದಾರೆ. ಈ ಚಿತ್ರದಲ್ಲಿ ಪ್ರೇಮ, ಪ್ರಣಯ, ಹಾಸ್ಯ ಸಾಹಸ ಎಲ್ಲವು ಇದೆಯಂತೆ. ಇದು ಈಗಿನ  ಪೀಳಿಗೆಗೆ  ಹೆಚ್ಚು ಹೊಂದುವ ಕಥೆ ಹೊಂದಿದೆ  ಎನ್ನುವ ಮಾತನ್ನು ಹೇಳಿದ್ದಾರೆ ನಿರ್ದೇಶಕ ರಘುರಾಮ್.ಮುಂದಿನ ವರ್ಷ ವ್ಯಾಲಂಟೈನ್ಸ್ ಡೇಯಂದು ಆಡಿಯೋ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ ನಿರ್ದೇಶಕ ರಘುರಾಮ್.
 
ಚಿತ್ರದಲ್ಲಿ ಬುಲೆಟ್ ಪ್ರಕಾಶ್, ರಂಗಾಯಣ ರಘು, ವೀನ ಸುಂದರ್, ಮಿಮಿಕ್ರಿ ದಯಾನಂದ್   ಮುಂತಾದವರು ನಟಿಸುತ್ತಿದ್ದಾರೆ. ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ.  
 

ವೆಬ್ದುನಿಯಾವನ್ನು ಓದಿ