ರಾಧಿಕಾ ಮುಂದಿನ ಚಿತ್ರದ ನಿರ್ದೇಶಕರು ನಂದಕಿಶೋರ್

ಬುಧವಾರ, 4 ಮಾರ್ಚ್ 2015 (09:47 IST)
ಕನ್ನಡ ಚಿತ್ರರಂಗದ ಮಾದಕ ತಂಗಿ ಅಂದ್ರೆ ಆಕೆ ಬೇರೆ ಯಾರು ಅಲ್ಲ ರಾಧಿಕ ಕುಮಾರ ಸ್ವಾಮಿ. ಆಕೆ ತನ್ನ ಮುಂದಿನ ಚಿತ್ರ ನಂದಕಿಶೋರ್ ಅವರ ನಿರ್ದೇಶನದಲ್ಲಿ ಮಾಡಿಸುವುದಾಗಿ ಹೇಳಿದ್ದಾಳೆ. ಆಕೆಯೇ ಆ ಚಿತ್ರದ ನಿರ್ಮಾಪಕಿ. ಈಗ ನಂದಕಿಶೋರ್  ಅತ್ತಾರಿಂಟಿಕಿ ದಾರೇದಿ ಚಿತ್ರದ ಕನ್ನಡ ಅವತರಣಿಕೆ ರನ್ನ ಅಂತಿಮ ಸುತ್ತಿನ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. 
ಅಂದಂಗೆ ಈ ಮಾದಕ ತಂಗಿ ನಂದಕಿರೋ ಗೆ ತಂದೆ ಮಗಳ ನಡುವಿನ ಬಾಂಧವ್ಯ ಹೊಂದಿರುವ ಕಥಾಹಂದರದ ಸಿನಿಮಾ ನಿರ್ದೇಶಿಸಲು ಹೇಳಿದ್ದಾಳಂತೆ. ಸೊ ಪ್ರೇಕ್ಷಕರಿಗೆ ಕಣ್ಣೀರಿಗೇನೂ ಬರವಿಲ್ಲ. ರಾಧಿಕ ನಂದಾ ಬಳಿ ಕಥಾ ವಸ್ತು ಹಳೆಯದಾಗಿದ್ದರು ಪ್ರೇಕ್ಷಕರಿಗೆ ಮಾತ್ರ ಹೊಸತನದ ಅನುಭವ ಉಂಟಾಗುವಂತಿರಬೇಕು ಎಂದು ಹೇಳಿದ್ದಾಳಂತೆ. ಪ್ರಸ್ತುತ ಆಕೆ ಅಭಿನಯದ ರುದ್ರತಾಂಡವ ಬಿಡುಗಡೆ ಆಗಿ ಜನ ಮೆಚ್ಚುಗೆ ಗಳಿಸಿದೆ. 

ವೆಬ್ದುನಿಯಾವನ್ನು ಓದಿ