ಈ ಫೋಟೋ ನೋಡಿ ನೆಟ್ಟಿಗರು ನಿಮ್ಮ ಮಗ ಯಥರ್ವ್ ನಿಮ್ ಥರಾನೇ ಎಂದಿದ್ದರು. ಯಥರ್ವ್ ಮತ್ತು ರಾಧಿಕಾ ಬಾಲ್ಯದಲ್ಲಿರುವ ಫೋಟೋ ಅಷ್ಟೊಂದು ಸಾಮ್ಯತೆ ಇತ್ತು. ಇದೀಗ ರಾಧಿಕಾ ಮತ್ತೆ ತಮ್ಮ ಬಾಲ್ಯದ ಫೋಟೋ ಮತ್ತು ಯಥರ್ವ್ ಫೋಟೋವನ್ನು ಪ್ರಕಟಿಸಿದ್ದು, ನೀವು ಹೇಳಿದ ಮೇಲೆಯೇ ನಾನು ಈ ವಿಚಾರ ಗಮನಿಸಿದ್ದು. ನಿಮ್ಮ ಅಭಿಪ್ರಾಯದಂತೆ ಯಥರ್ವ್ ನಾನು ಚಿಕ್ಕವಳಿದ್ದಾಗ ಇದ್ದಂತೆ ಇರುವುದು ನಿಜ. ಆದರೆ ಆತ ನನ್ನ ಹಾಗೂ ಯಶ್ ಇಬ್ಬರ ಹಾಗಿದ್ದಾನೆ ಎಂದು ಬರೆದುಕೊಂಡಿದ್ದಾರೆ.