ಸಿನಿಮಾದಿಂದ ದೂರವಿದ್ದರೂ ಬರ್ತ್ ಡೇ ಗರ್ಲ್ ರಾಧಿಕಾ ಪಂಡಿತ್ ಅಂದರೆ ಅದೇನು ಕ್ರೇಜ್!

ಶನಿವಾರ, 7 ಮಾರ್ಚ್ 2020 (08:59 IST)
ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಗೆ ಇಂದು ಜನ್ಮದಿನದ ಸಂಭ್ರಮ. ಸಿನಿಮಾಗಳಿಂದ ಸದ್ಯಕ್ಕೆ ದೂರವಿದ್ದರೂ ರಾಧಿಕಾ ಮೇಲೆ ಅಭಿಮಾನಿಗಳ ಪ್ರೀತಿಯೇನೂ ಕಡಿಮೆಯಾಗಿಲ್ಲ.


ರಾಕಿಂಗ್ ಸ್ಟಾರ್ ಯಶ್ ನ ಮುದ್ದಿನ ಮಡದಿ ರಾಧಿಕಾ ಈಗ ಇಬ್ಬರು ಮಕ್ಕಳ ತಾಯಿ. ಹಾಗಿದ್ದರೂ ಮೊದಲಿನ ಚಾರ್ಮ್ ಉಳಿಸಿಕೊಂಡಿರುವ ಕ್ವೀನ್ ಬರ್ತ್ ಡೇಗೆ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ವಿಶ್‍ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲ, ಮತ್ತೆ ತೆರೆ ಮೇಲೆ ಬನ್ನಿ ಎಂದು ಒತ್ತಾಯಿಸುತ್ತಲೇ ಇದ್ದಾರೆ. ರಾಧಿಕಾ ಬರ್ತ್ ಡೇ ಅಂಗವಾಗಿ ಟ್ವಿಟರ್ ನಲ್ಲಿ ಅಭಿಮಾನಿಗಳು ಟ್ರೆಂಡ್ ಸೃಷ್ಟಿಸಿದ್ದಾರೆ. ಇದಲ್ಲವೇ ಅಭಿಮಾನವೆಂದರೆ?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ