ಕಿಚ್ಚ ಸುದೀಪ್ ರೊಮ್ಯಾನ್ಸ್ ಮಾಡಲಿರುವ ನಾಯಕಿ ಇವರೇ!

ಶುಕ್ರವಾರ, 6 ಮಾರ್ಚ್ 2020 (10:47 IST)
ಬೆಂಗಳೂರು: ಅನೂಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ಅಭಿನಯಿಸಲಿರುವ ‘ಫ್ಯಾಂಟಮ್’ ಚಿತ್ರಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ.


ಹೊಸ ಲುಕ್ ಮೂಲಕ ಸುದೀಪ್ ಈಗಾಗಲೇ ಗಮನಸೆಳೆದಿದ್ದಾರೆ. ವಿಕ್ರಾಂತ್ ರಾಣಾ ಎಂಬ ಪಾತ್ರ ಮಾಡುತ್ತಿರುವುದಾಗಿಯೂ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿತ್ತು.

ಆದರೆ ಫ್ಯಾಂಟಮ್ ನಲ್ಲಿ ಸುದೀಪ್ ನಾಯಕಿ ಯಾರೆಂದು ಈಗ ಗೊತ್ತಾಗಿದೆ. ಸುದೀಪ್ ಜತೆ ಈ ಸಿನಿಮಾದಲ್ಲಿ ಖ್ಯಾತ ನಟಿಯನ್ನೇ ಹಾಕಿಕೊಳ್ಳಬಹುದು ಎಂಬ ಸುದ್ದಿ ಹರಿದಾಡುತ್ತಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಮೂಲಗಳ ಪ್ರಕಾರ ಫ್ಯಾಂಟಮ್ ಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಆಯ್ಕೆಯಾಗಿದ್ದಾರಂತೆ. ಅವರು ಏಪ್ರಿಲ್ ನಲ್ಲಿ ಚಿತ್ರತಂಡ ಕೂಡಿಕೊಳ್ಳುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ