ನಟಿ ರಾಧಿಕಾ ಪಂಡಿತ್ ಸಿನಿಮಾಗೆ ಕಮ್ ಬ್ಯಾಕ್?
ರಾಧಿಕಾ ಪಂಡಿತ್ ಎಂದರೆ ಕನ್ನಡದ ಲೇಡಿ ಸೂಪರ್ ಸ್ಟಾರ್. ಅವರಿಗೆ ಪ್ರತ್ಯೇಕ ಅಭಿಮಾನಿ ಬಳಗದವರೇ ಇದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮತ್ತು ಅವರದ್ದು ಹಿಟ್ ಜೋಡಿ.
ರಾಧಿಕಾ ಮತ್ತೆ ಸಿನಿಮಾಗೆ ಕಮ್ ಬ್ಯಾಕ್ ಮಾಡಬೇಕು ಎಂಬುದು ಅಭಿಮಾನಿಗಳ ಬಯಕೆ. ಇದೀಗ ಹೊಸ ವರ್ಷದ ಸಂದರ್ಭದಲ್ಲೇ ರಾಧಿಕಾ ಕಮ್ ಬ್ಯಾಕ್ ಮಾಡುವ ಸುದ್ದಿ ಕೇಳಿಬರುತ್ತಿದೆ.