ಹುಟ್ಟುಹಬ್ಬದ ದಿನ ಭಾರೀ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ತಂದ ಯಶ್ ಪತ್ರ

ಶುಕ್ರವಾರ, 6 ಜನವರಿ 2023 (08:40 IST)
ಬೆಂಗಳೂರು: ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವಿದ್ದು ಹುಟ್ಟುಹಬ್ಬಕ್ಕೆ ಯಶ್ ಹೊಸ ಸುದ್ದಿ ಕೊಡಬಹುದು, ಅಭಿಮಾನಿಗಳನ್ನು ಭೇಟಿ ಮಾಡಬಹುದು ಎಂದು ಕಾದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಯಶ್ ತಮ್ಮ ಅಭಿಮಾನಿಗಳಿಗಾಗಿ ಸೋಷಿಯಲ್ ಮೀಡಿಯಾ ಮೂಲಕ ಪತ್ರ ಬರೆದಿದ್ದು, ಈ ಬಾರಿಯೂ ಹೊಸ ಸಿನಿಮಾ ಘೋಷಣೆ ಇಲ್ಲ ಮತ್ತು ಅಭಿಮಾನಿಗಳನ್ನು ಭೇಟಿ ಮಾಡಲೂ ಆಗುತ್ತಿಲ್ಲ ಎಂದು ನಿರಾಸೆ ನೀಡಿದ್ದಾರೆ.

‘ಕಳೆದೊಂದಷ್ಟು ವರ್ಷದಿಂದ ನನ್ನ ಹುಟ್ಟುಹಬ್ಬವನ್ನು ನಿಮ್ಮ ದಿನದಂತೆ ಆಚರಿಸಿಕೊಂಡು ಬರುತ್ತಿರುವುದರಿಂದ ಈ ದಿನ ವಿಶೇಷ ಅನ್ನಿಸೋಕೆ ಶುರುವಾಗಿದೆ. ಹಾಗಾಗಿ ಈ ವರ್ಷ ಹುಟ್ಟುಹಬ್ಬದಂದು ನಿಮ್ಮೊಂದಿಗೆ ಸಮಯ ಕಳೆಯಬೇಕೆಂದುಕೊಂಡಿದ್ದೆ. ಆದರೆ ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸಮಯ ಕೊಡಿ. ನಿಮಗಾಗಿ ವಿಭಿನ್ನವಾಗಿರುವುದನ್ನು ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ತಾಳ್ಮೆ ಮತ್ತು ಪ್ರೀತಿಯೇ ನನ್ನ ಈ ವರ್ಷದ ಹುಟ್ಟುಹಬ್ಬದ ಉಡುಗೊರೆ. ಕ್ಷಮಿಸಿ. ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ನಿಮಗೆ ಸಿಗುತ್ತೇನೆ’ ಎಂದು ಯಶ್ ಹೇಳಿದ್ದಾರೆ. ಹೀಗಾಗಿ ಯಶ್ ಹೊಸ ಸಿನಿಮಾ ಘೋಷಣೆ ಮಾತ್ರವಲ್ಲ, ಅವರ ಭೇಟಿ ಕೂಡಾ ಅಭಿಮಾನಿಗಳಿಗೆ ಸಾಧ‍್ಯವಾಗುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ