ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ನನಗೆ ಸಾಥ್ ಕೊಡುವವರು ಇವರೇ ಎಂದ ರಾಧಿಕಾ ಪಂಡಿತ್
ಐರಾ ಮತ್ತು ಜ್ಯೂನಿಯರ್ ನ್ನು ನಿಭಾಯಿಸುವುದು ಸುಲಭವಲ್ಲ. ನಾನು ಹೇಗೆ ಇಬ್ಬರನ್ನೂ ನೋಡಿಕೊಳ್ಳುತ್ತೇನೆ ಎಂದು ನಿಮಗೆ ಅಚ್ಚರಿಯಾಗಬಹುದು. ಇದಕ್ಕೆ ನನಗೆ ಬೆನ್ನುಲುಬಾಗಿರುವವರು ನನ್ನ ಅಪ್ಪ-ಅಮ್ಮ. ಇವರಿಂದಾಗಿಯೇ ನನಗೆ ಸ್ವಲ್ಪ ರಿಲ್ಯಾಕ್ಸ್ ಆಗಲು ಸಮಯ ಸಿಗುತ್ತಿದೆ. ನನಗೆ ಇವರು ಮಮ್ಮಿ-ಪಪ್ಪ. ಐರಾಗೆ ಮಿಮಿ, ಅಜ್ಜು. ನಾನು ಚಿಕ್ಕವಳಿದ್ದಾಗ ಅಮ್ಮನನ್ನು ಮಮ್ಮಿ ಎನ್ನುತ್ತಿದ್ದ ಕಾರಣಕ್ಕೆ ಅವಳು ನನ್ನ ಅಮ್ಮನನ್ನು ಮಿಮಿ ಎನ್ನುತ್ತಿದ್ದಾಳೆ. ಇವರಿಬ್ಬರನ್ನೂ ನನ್ನಿಬ್ಬರೂ ಮಕ್ಕಳೂ ತುಂಬಾ ಹಚ್ಚಿಕೊಂಡಿದ್ದಾರೆ. ಅವರನ್ನು ಒಂದು ದಿನವೂ ಮಿಸ್ ಮಾಡಿಕೊಳ್ಳಲು ಇಷ್ಟಪಡಲ್ಲ ಎಂದು ರಾಧಿಕಾ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.