ಮುದ್ದು ಮಗನ ಬರ್ತ್ ಡೇಗೆ ರಾಧಿಕಾ ಪಂಡಿತ್ ಹಂಚಿಕೊಂಡ ವಿಶೇಷ ಫೋಟೋ
ಶುಕ್ರವಾರ, 30 ಅಕ್ಟೋಬರ್ 2020 (10:24 IST)
ಬೆಂಗಳೂರು: ರಾಧಿಕಾ ಪಂಡಿತ್-ರಾಕಿಂಗ್ ಸ್ಟಾರ್ ಯಶ್ ದಂಪತಿಯ ಪುತ್ರ ಯಥರ್ವ್ ಯಶ್ ಗೆ ಇಂದು ಪ್ರಥಮ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಸ್ಟಾರ್ ದಂಪತಿಯ ಪುತ್ರನ ಹುಟ್ಟುಹಬ್ಬವನ್ನು ಅಭಿಮಾನಿಗಳೂ ತಮ್ಮ ಮನೆ ಮಗುವಿನ ಹಬ್ಬವೆಂಬಂತೆ ಸಂಭ್ರಮಿಸುತ್ತಿದ್ದಾರೆ.
ಈ ನಡುವೆ ರಾಧಿಕಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಯಥರ್ವ್ ಫೋಟೋಗಳನ್ನು ಹಂಚಿಕೊಂಡಿದ್ದು, ನೀನು ಯಾವತ್ತಿಗೂ ನನ್ನ ಬೇಬೀ ಬಾಯ್ ಲವ್ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಈ ವಿಶೇಷ ಫೋಟೋದಲ್ಲಿ ಯಥರ್ವ್ ಹುಟ್ಟಿದ ಗಳಿಗೆಯಲ್ಲಿ ಮೊದಲ ಬಾರಿಗೆ ರಾಧಿಕಾ-ಯಶ್ ಮಗನ ಮುಖ ನೋಡಿದ ಗಳಿಗೆಯೂ ಇದೆ. ಇನ್ನು, ಯಥರ್ವ್ ಬರ್ತ್ ಡೇಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸಿಡಿಪಿ ಬಿಡುಗಡೆ ಮಾಡಿ ಸಂಭ್ರಮಿಸಿದ್ದಾರೆ.