ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಸ್ಪೆಷಲ್ಲಾಗಿ ನಡೆದಿದೆ ಆಯುಧ ಪೂಜೆ

ಸೋಮವಾರ, 26 ಅಕ್ಟೋಬರ್ 2020 (10:07 IST)
ಬೆಂಗಳೂರು: ಆಯುಧ ಪೂಜೆಯನ್ನು ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ವಿಶೇಷವಾಗಿ ಆಚರಿಸಲಾಗಿದೆ. ಇದನ್ನು ಸ್ವತಃ ರಾಧಿಕಾ ಪಂಡಿತ್ ಫೋಟೋ ಮೂಲಕ ತಿಳಿಸಿದ್ದಾರೆ.


ರಾಕಿಂಗ್ ಸ್ಟಾರ್ ಯಶ್ ಮನೆಯ ವಾಹನಗಳ ನಡುವೆ ಮಗಳು ಐರಾ ಪುಟಾಣಿ ಸೈಕಲ್ ಗೂ ಪೂಜೆ ಮಾಡಲಾಗಿದೆ. ಈ ಫೋಟೋವನ್ನು ಹಂಚಿಕೊಂಡಿರುವ ರಾಧಿಕಾ ನಮ್ಮ ಮನೆಲಿ ಆಯುಧ ಪೂಜೆ ಹೀಗೆ ನಡೀತು ಎಂದು ಬರೆದುಕೊಂಡಿದ್ದಾರೆ. ನಿನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಮಗಳು ಐರಾ ಐಸ್ ಕ್ರೀಂ ತಿನ್ನುವ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಒಟ್ಟಾರೆ ರಾಕಿಂಗ್ ಜೋಡಿ ಯಾವುದೇ ಫೋಟೋ, ವಿಡಿಯೋ ಪ್ರಕಟಿಸಿದರೂ ಅದು ವೈರಲ್ ಆಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ