ಈ ವ್ಯಾಲೆಂಟೈನ್ಸ್ ಡೇ ತುಂಬಾ ಸ್ಪೆಷಲ್ ಅಂದ್ರು ರಾಧಿಕಾ ಪಂಡಿತ್
ಶುಕ್ರವಾರ, 14 ಫೆಬ್ರವರಿ 2020 (09:23 IST)
ಬೆಂಗಳೂರು: ಇಂದು ಪ್ರೇಮಿಗಳ ದಿನ. ಸ್ಯಾಂಡಲ್ ವುಡ್ ನ ಮೋಸ್ಟ್ ಲವ್ಲೀ ಜೋಡಿ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಗೆ ಇಂದು ವಿಶೇಷ ದಿನವಂತೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಗೂ ಯಶ್ ಜತೆಗಿರುವ ಎಂಟು ವರ್ಷಗಳ ಹಲವು ಫೋಟೋಗಳನ್ನು ಹಾಕಿಕೊಂಡಿರುವ ರಾಧಿಕಾ ಈ ವ್ಯಾಲೆಂಟೈನ್ಸ್ ಡೇ ನಮಗೆ 10 ನೇ ವರ್ಷದ್ದು ಎಂದು ಹೇಳಿದ್ದಾರೆ.
10 ನೇ ವರ್ಷದ ವ್ಯಾಲೆಂಟೈನ್ಸ್ ಡೇ ಪಯಣದಲ್ಲಿ ನಾವು ನಮ್ಮ ಕೈಯಲ್ಲಿ ಇಬ್ಬರು ಅಮೂಲ್ಯ ರತ್ನಗಳನ್ನು ಹಿಡಿದುಕೊಂಡಿದ್ದೇವೆ ಎಂದು ತಮ್ಮಿಬ್ಬರು ಮಕ್ಕಳನ್ನು ನೆನೆಸಿಕೊಂಡಿದ್ದಾರೆ.