ಬೆಂಗಳೂರು: ಸ್ಯಾಂಡಲ್ ವುಡ್ ನ ಕಿಂಗ್-ಕ್ವೀನ್ ಜೋಡಿ ಯಶ್-ರಾಧಿಕಾ ಪಂಡಿತ್ ಗೆ ಇಂದು ವಿಶೇಷ ದಿನ. ಇಂದು ರಾಕಿಂಗ್ ಜೋಡಿ ವಿವಾಹ ವಾರ್ಷಿಕೋತ್ಸವ.
ಡಿಸೆಂಬರ್ 9,2016 ರಂದು ಯಶ್-ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಇಬ್ಬರು ಮುದ್ದಾದ ಮಕ್ಕಳಿಗೆ ಪೋಷಕರಾಗಿದ್ದಾರೆ. ಇನ್ನು, ಈ ಫೇವರಿಟ್ ಜೋಡಿಯ ವಿವಾಹ ವಾರ್ಷಿಕೋತ್ಸವಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಫೋಟೋ, ಡಿಪಿ ಮೂಲಕ ಸ್ಪೆಷಲ್ ಆಗಿ ಶುಭಾಷಯ ಕೋರಿದ್ದಾರೆ.