ಕೇವಲ ಪ್ರಮೀಳಾ ಜೋಷಾಯ್ ಗೆ ಮಾತ್ರವಲ್ಲ, ಪತಿ, ನಟ ಸುಂದರ್ ರಾಜ್, ಪುತ್ರಿ ಮೇಘನಾ ರಾಜ್, ಅವರ ನವಜಾತ ಪುತ್ರನಿಗೂ ಕೊರೋನಾ ಪಾಸಿಟಿವ್ ಆಗಿದೆ ಎಂದು ಸ್ವತಃ ಮೇಘನಾ ಖಚಿತಪಡಿಸಿದ್ದಾರೆ. ನನ್ನ ತಂದೆ, ತಾಯಿ, ನನಗೆ ಮತ್ತು ಜ್ಯೂನಿಯರ್ ಚಿರುಗೆ ಕೊರೋನಾ ಪಾಸಿಟಿವ್ ಬಂದಿದೆ. ಆದರೆ ಯಾರೂ ಆತಂಕಪಡಬೇಕಾಗಿಲ್ಲ. ಜ್ಯೂನಿಯರ್ ಚಿರು, ನಾವು ಆರೋಗ್ಯವಾಗಿದ್ದೇವೆ. ಇತ್ತೀಚೆಗೆ ನಮ್ಮ ಸಂಪರ್ಕಕ್ಕೆ ಬಂದವರೆಲ್ಲರೂ ಆರೋಗ್ಯ ತಪಾಸಣೆಗೊಳಗಾಗಿ. ನಾವು ಕುಟುಂಬಸ್ಥರೆಲ್ಲರೂ ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಡುತ್ತೇವೆ ಎಂದು ಮೇಘನಾ ಹೇಳಿದ್ದಾರೆ.