ಸ್ಮಶಾನದಲ್ಲಿ ಕಾಲು ಜಾರಿ ಬಿದ್ದ ನಟಿ ರಾಧಿಕಾ

ಸೋಮವಾರ, 11 ಫೆಬ್ರವರಿ 2019 (09:15 IST)
ಬೆಂಗಳೂರು: ಸ್ಮಶಾನದಲ್ಲಿ ಶೂಟಿಂಗ್ ವೇಳೆ ಕಾಲು ಜಾರಿ ಬಿದ್ದ ನಟಿ ರಾಧಿಕಾ ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದಾರೆ.


ತಮ್ಮದೇ ನಿರ್ಮಾಣ ಮತ್ತು ನಟನೆಯಲ್ಲಿ ಮೂಡಿಬರುತ್ತಿರುವ ‘ಭೈರಾದೇವಿ’ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಶಾಂತಿನಗರದ ಸ್ಮಶಾನವೊಂದರಲ್ಲಿ ರಾತ್ರಿ ವೇಳೆ ಚಿತ್ರೀಕರಣ ನಡೆಸಲಾಗುತ್ತಿತ್ತು.

ಈ ವೇಳೆ ಒಂದು ಗೋರಿ ಮೇಲೆ ರಾಧಿಕಾ ನಡೆದುಕೊಂಡು ಬರುವ ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವೇಳೆ ರಾಧಿಕಾ ಕಾಲು ಜಾರಿ ಬಿದ್ದಿದ್ದು, ಬೆನ್ನಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವೈದ್ಯರು ಒಂದು ತಿಂಗಳ ವಿಶ್ರಾಂತಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ